ಚಾಮರಾಜನಗರ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಅವಕಾಶ ಇದ್ದಾಗ ಮಾಡಲಿಲ್ಲ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಗುರುವಾರ ಹೇಳಿದರು.

‘ಇಂಡಿಯಾ’ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಅವಕಾಶಗಳಿದ್ದವು. ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಯಾವ ಸಂದರ್ಭದಲ್ಲಿ ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದೀರಾ’ ಎಂದು ಖರ್ಗೆಯವರೇ ಕೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರೇ ಚರ್ಚಿಸಲಿ’ ಎಂದರು.

‘ದಲಿತ ನಾಯಕನನ್ನು ಹರಕೆಯ ಕುರಿ ಮಾಡಲಾಗುತ್ತಿದೆಯೇ’ ಎಂದು ಕೇಳಿದ್ದಕ್ಕೆ, ‘ಖರ್ಗೆಯವರು ದಲಿತ ಮುಖಂಡರು ಎಂದು ನಾವು ಒಪ್ಪಿಕೊಳ್ಳುತ್ತೇವೆ. ಹರಕೆಯ ಕುರಿ ಮಾತನ್ನು ನಾನು ಹೇಳುತ್ತಿಲ್ಲ. ರಾಜ್ಯದ ಅನೇಕ ನಾಯಕರು, ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ‘ಇಂಡಿಯಾ’ ಸಭೆಯಲ್ಲಿ ಮಮತಾ ಬ್ಯಾನರ್ಜಿಯವರು ಖರ್ಗೆಯವರ ಹೆಸರು ಘೋಷಣೆ ಮಾಡಿದಾಗ ಏನು ನಡೆಯಿತು? ಯಾವ್ಯಾವ ನಾಯಕರು ಹೇಗೆ ನಡೆದುಕೊಂಡರು, ಯಾವ ರೀತಿ ಪ್ರತಿಕ್ರಿಯಿಸಿದರು ಎಂದು ನಾನು ಹೇಳುವುದಿಲ್ಲ. ಮಾಧ್ಯಮವೇ ಹೇಳಿದರೆ ಚೆನ್ನಾಗಿರುತ್ತದೆ’ ಎಂದು ಉತ್ತರಿಸಿದರು.

ಉಪರಾಷ್ಟ್ರಪತಿ ಧನಕರ್ ಅವರನ್ನು ವ್ಯಂಗ್ಯವಾಗಿ ಅನುಕರಣೆ ಮಾಡಿರುವ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಪರಾಷ್ಟ್ರಪತಿಯವರನ್ನು ಮಿಮಿಕ್ರಿ ಮಾಡಿದ್ದನ್ನು ಜನರು ನೋಡಿದ್ದಾರೆ. ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದುದನ್ನು, ಅಲ್ಲಿದ್ದ ಸಂಸದರು ಯಾವ ರೀತಿ ವರ್ತಿಸಿದ್ದಾರೆ ಎಂಬುದನ್ನೂ ಜನರು ನೋಡಿದ್ದಾರೆ. ಲೋಕಸಭಾ ಸದಸ್ಯರು, ಇತರರ ಬಗ್ಗೆ ಮಾತನಾಡುವುದು ಬೇರೆ. ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿಯವರನ್ನು ಸಂಬೋಧಿಸುವಾಗ, ಅವರ ಬಗ್ಗೆ ಮಾತನಾಡುವಾಗ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ ಕಾಂಗ್ರೆಸ್‌ಗೆ ಇರಬೇಕಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.