ಮೈಸೂರು: ವೈಭವದ ದಸರಾ ಮೆರವಣಿಗೆ ಮುಗಿಸಿರುವ ಗಜಪಡೆಯಲ್ಲಿ ಗುರುವಾರ ಆತಂಕ ಛಾಯೆ. ಇಷ್ಟು ದಿನ ಅರಮನೆಯ ಸುತ್ತಲೂ ಓಡಾಡುತ್ತ ನಗರ ಪ್ರದಕ್ಷಿಣೆ ಮಾಡುತ್ತಿದ್ದ ಆನೆಗಳಿಗೆ ಮರಳಿ ಕಾಡಿಗೆ ಹೋಗಲು ಮನಸ್ಸೇ ಬರಲಿಲ್ಲ.

ಮೂಲ ಶಿಬಿರಗಳಿಗೆ ಕರೆದೊಯ್ಯಲು ಬಂದಿದ್ದಲಾರಿಗಳನ್ನು ಕಾಣುತ್ತಿದ್ದಂತೆ ಆನೆಗಳು ಹಿಂದಡಿಯಿಟ್ಟವು.

ಈ ಬಾರಿ ದಸರಾಗೆ ಬಂದಿದ್ದ ಅತಿ ಕಿರಿ ಆನೆ ಎನಿಸಿಕೊಂಡಿದ್ದ17 ವರ್ಷದ ಲಕ್ಷ್ಮಿಗೆ ಮಾತ್ರಯಾರೇ ಪುಸಲಾಯಿಸಿದರೂ,ಏನೇ ಪ್ರಯತ್ನಿಸಿದರೂ ಹಟ ಕಡಿಮೆಯಾಗಲಿಲ್ಲ.ಮನೆ ಬಿಟ್ಟು ಬರಲು ಒಲ್ಲದ ಮಕ್ಕಳಂತೆ‘ನಾ ಬರೋದಿಲ್ಲ..., ನಾನೆಲ್ಲೂ ಬರೋದಿಲ್ಲ...’ಎಂದು ರಚ್ಚೆಹಿಡಿಯಿತು.

ಹಗ್ಗ ಜಗ್ಗಿ ಬೇರೆ ಆನೆಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿತು. ಲಕ್ಷ್ಮಿಯನ್ನು ಸಮಾಧಾನಪಡಿಸಿ ಶಿಬಿರಕ್ಕೆ ಕರೆದೊಯ್ಯಲು ಅಂಬಾರಿ ಹೊರುವ ಅರ್ಜುನನೇ ಬಂದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ:ಮುಗಿದ ದಸರಾ ಸಂಭ್ರಮ: ಕಾಡಿಗೆ ಹೊರಟವು ಮೆರವಣಿಗೆ ಆನೆಗಳು

ಮೊದಲಿಗೆ ಗೋಪಿ, ನಂತರ ಅರ್ಜುನ, ದುರ್ಗಾಪರಮೇಶ್ವರಿ ಹಾಗೂ ವಿಕ್ರಂ ಆನೆಗಳು ಸೊಂಡಲಿನಿಂದ ತಳ್ಳಿ, ಮುಂದಲೆ ಮತ್ತು ದಂತದಿಂದ ನೂಕಿದರೂ ಲಕ್ಷ್ಮಿ ಮಾತು ಕೇಳಲಿಲ್ಲ. ‘ಬೇಕಾದರೆ ನೀವೆಲ್ಲ ಹೋಗಿ, ನಾನು ಬರಲ್ಲ...’ಎಂದು ತನ್ನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಟಿತು.ಮಾವುತರು, ಸಹಾಯಕರು, ಅರಣ್ಯ ಸಿಬ್ಬಂದಿಯೂ ಹೈರಾಣಾದರು.

ಎರಡೂವರೆ ಗಂಟೆ ದಾಟುತ್ತಿದ್ದಂತೆ ಸಿಬ್ಬಂದಿ ಮತ್ತೊಂದು ಲಾರಿ ತರಿಸಿ ಹೊಸ ತಂತ್ರಕ್ಕೆ ಮೊರೆಹೋದರು. ಸುತ್ತ ಮೂರು ಲಾರಿ ನಿಲ್ಲಿಸಿ, ಗೋಪಿ ಆನೆ ಸಹಾಯದಿಂದ ಲಕ್ಷ್ಮಿಯನ್ನು ಲಾರಿ ಏರುವಂತೆ ಮಾಡಲಾಯಿತು. ಆನೆಗಳು ಒಲ್ಲದ ಮನಸ್ಸಿನಿಂದ ಲಾರಿ ಏರುತ್ತಿರುವುದು ಅವುಗಳ ವರ್ತನೆಯೇ ತೋರುತ್ತಿತ್ತು.

ಇದೇ ಸಂದರ್ಭ ಬೇರೆಬೇರೆ ಸ್ಥಳಗಳಲ್ಲಿ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಯತ್ನವಂತು ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.