ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಮುಂಬೈ ಮೂಲದ ಇಬ್ಬರು ವ್ಯಕ್ತಿಗಳಿಗೆ ನೀಡಿದ್ದ ಕೋಟ್ಯಂತರ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಕೊಡುವಂತೆ ದೈವಕ್ಕೆ ಮೊರೆ ಹೋಗಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

ಸ್ವಾಮೀಜಿ ನಿಧನರಾಗುವುದಕ್ಕೂ ಮುನ್ನ ಹಲವರಿಗೆ ಸಾಲ ಕೊಟ್ಟಿದ್ದರು ಎಂಬ ಅಂಶವನ್ನು ಈ ವಿಡಿಯೊ ಬಹಿರಂಗಪಡಿಸಿದ್ದು, ಸಾಲ ಪಡೆದವರು ಯಾರು ಎಂಬ ಬಗ್ಗೆ ಖಚಿತವಾದ ದಾಖಲೆಗಳು ಸಿಗುತ್ತಿಲ್ಲ.

‘ಶಿರೂರು ಮಠದಲ್ಲಿ ಪ್ರತಿವರ್ಷ 2 ಕೋಲ ನಡೆಸುವುದು ಸಂಪ್ರದಾಯ. ಶಿರೂರು ಸ್ವಾಮೀಜಿಗಳೇ ಮುಂದೆ ನಿಂತು ಕೋಲ ನಡೆಸುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಶಿರೂರು ಮೂಲಮಠದಲ್ಲಿ ನಡೆದ ಕೋಲದಲ್ಲಿಶ್ರೀಗಳು ಕೊಟ್ಟ ಸಾಲವನ್ನು ಮರಳಿಸುವಂತೆ ದೈವಗಳಿಗೆ ದೂರು ನೀಡಿರುವ ದೃಶ್ಯಗಳು’ ಲಭ್ಯವಾಗಿವೆ.

‘ನಿನ್ನ (ದೈವದ ಕುರಿತು) ಶಕ್ತಿಯ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಹಾಗಾಗಿ, ನಿನಗೆ ಈ ಕೋಲ ಏರ್ಪಡಿಸಿದ್ದೇನೆ. ಮುಂಬೈ ಮೂಲದ ಇಬ್ಬರು ಶೆಟ್ಟಿಗಳು ಕ್ರಮವಾಗಿ ₹ 12 ಕೋಟಿ ಹಾಗೂ ₹ 14 ಕೋಟಿ ಸಾಲವನ್ನಾಗಿ ಪಡೆದಿದ್ದಾರೆ. ಇದುವರೆಗೂ ಸಾಲ ಮರುಪಾವತಿ ಮಾಡಿಲ್ಲ. ಅದನ್ನು ನನಗೆ ಹಿಂದಿರುಗಿಸುವ ಜವಾಬ್ದಾರಿ ನಿನ್ನ ಮೇಲಿದೆ’ ಎಂದು ಸ್ವಾಮೀಜಿ ಹೇಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ಕಷ್ಟ ಅಂತ ಬಂದವರಿಗೆ ಶಿರೂರು ಶ್ರೀಗಳು ಬರಿಗೈನಲ್ಲಿ ಕಳುಹಿಸಿದ ಉದಾಹರಣೆಗಳಿಲ್ಲ. ಸಾಮಾನ್ಯವಾಗಿ ಮಠದ ವ್ಯವಹಾರ ಜತೆ ಇತರೆ ಉದ್ಯಮಗಳಲ್ಲಿ ಹಣವನ್ನು ವಿನಿಯೋಗಿಸಿದ್ದರು. ಹಲವರಿಗೆ ಸಾಲದ ರೂಪದಲ್ಲಿ ಹಣವನ್ನು ನೀಡಿದ್ದರು.ಆದರಲ್ಲಿ ಎಷ್ಟು ಜನ ಹಿಂದಿರುಗಿಸಿದ್ದಾರೆ, ಎಷ್ಟು ಜನ ಬಾಕಿ ಇಟ್ಟಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ’ ಎಂದು ಶಿರೂರು ಶ್ರೀಗಳ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.