ಚಿಕ್ಕಬಳ್ಳಾಪುರ: ಮಂಡ್ಯ ಲೋಕಸಭೆ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದಾಗಿ ಬುಧವಾರ ನಗರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪತ್ನಿ ಸಮೇತ ಹಾಜರಾಗಿ ಜಾಮೀನು ಪಡೆದರು.

2016ರಲ್ಲಿ ಚಿಕ್ಕಬಳ್ಳಾಪುರ ನಿವಾಸಿ ಪ್ರವೀಣ್ ಎಂಬುವರು ಶಿವರಾಮೇಗೌಡ ಅವರ ಒಡೆತನದ ರಾಯಲ್ ಕಾನ್ಕಾರ್ಡ್ ಏಜುಕೇಷನ್ ಟ್ರಸ್ಟ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡ ಅವರು ಈವರೆಗೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಅವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿ, ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿತ್ತು.

ಬಂಧನದ ಭೀತಿಯಿಂದಾಗಿ ಶಿವರಾಮೇಗೌಡರು ಮುಂದಿನ ವಿಚಾರಣೆಗೂ ಮುನ್ನವೇ ಬುಧವಾರ ಪತ್ನಿ ಸುಧಾ ಅವರ ಸಮೇತ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿ ವೈಯಕ್ತಿಕ ಬಾಂಡ್, ಭದ್ರತಾ ಖಾತ್ರಿಯೊಂದಿಗೆ ಜಾಮೀನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.