ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿರುವ ಕೇರಳದ ವಯನಾಡು ಹಾಗೂ ಕೆ.ಸಿ. ವೇಣುಗೋಪಾಲ್ ಸ್ಪರ್ಧಿಸಿರುವ ಅಲೆಪ್ಪಿ ಕ್ಷೇತ್ರಕ್ಕೆ ಬುಧವಾರ ಬೇಟಿ ನೀಡಿದ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಚುನಾವಣಾ ಕಾರ್ಯತಂತ್ರಗಳ ಕುರಿತು ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಸಿದರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಚೆನ್ನಿತ್ತಲ, ಕಲ್ಪಟ ಶಾಸಕ ಸಿದ್ದಿಕ್, ಸುಲ್ತಾನ್ ಬತೇರಿ ಶಾಸಕ ಬಾಲಕೃಷ್ಣನ್, ಎಐಸಿಸಿ ಉಸ್ತುವಾರಿ ದೀಪಾ ದಾಸ್ ಉಪಸ್ಥಿತರಿದ್ದರು.

ಮೂರು ದಿನಗಳ ಪ್ರವಾಸದಲ್ಲಿ ಮುಫ್ತಿ ಶೇಕ್ ಅಬೂಬಕರ್ ಅಹಮದ್ (ಎಪಿ ಉಸ್ತಾದ್) ಸೇರಿದಂತೆ ಮುಸ್ಲಿಂ ಧಾರ್ಮಿಕ ಮುಖಂಡರು, ವಯನಾಡ್ ಯುಡಿಎಫ್ ಅಧ್ಯಕ್ಷ ಕೆ.ಕೆ. ಅಹಮದ್ ಹಾಜಿ ಅವರನ್ನು ಜಮೀರ್ ಅಹಮದ್ ಖಾನ್, ಅಭ್ಯರ್ಥಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು.

ಮಹಾರಾಷ್ಟ್ರದಲ್ಲೂ ಪ್ರಚಾರ: ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ಆಹ್ವಾದ ಮೇರೆಗೆ ಜಮೀರ್ ಅವರು ಮಹಾರಾಷ್ಟ್ರದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.