ಮಡಿಕೇರಿ: ಸಾವಿರಾರು ಭಕ್ತರ ನಂಬಿಕೆಯ ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಇಲ್ಲಿನ ತಲಕಾವೇರಿ ಸಜ್ಜಾಗಿದೆ.

ಅ.17ರಂದು (ಸೋಮವಾರ) ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ಉಕ್ಕಲಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ಗಳಿಗೆ ಕಣ್ತುಂಬಿಕೊಳ್ಳಲು ಹಾಗೂ ಪವಿತ್ರ ಜಲ ಸಂಗ್ರಹಿಸಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರಲಿದ್ದಾರೆ.

ಎರಡು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ಸರಳವಾಗಿ ನಡೆದಿದ್ದ ತೀರ್ಥೋದ್ಭವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಸಂಜೆ ತೀರ್ಥೋದ್ಭವವಾಗುವುದರಿಂದ ಅಂದಾಜು 10ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಿದ್ಧತಾ ಕಾರ್ಯ ಕೈಗೊಂಡಿದೆ.

ಸೋಮವಾರ ಸಂಜೆ 5ರಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾಗಲಿವೆ. ಅರ್ಚಕ ಗುರುರಾಜ್ ಆಚಾರ್ಯ ನೇತೃತ್ವದಲ್ಲಿ 9 ಮಂದಿ ಅರ್ಚಕರು ಕುಂಕುಮಾರ್ಚನೆ, ಅಭಿಷೇಕ ಹಾಗೂ ಮಹಾಪೂಜಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ.

ಕಾವೇರಿ ಮಾತೆ, ಮಹಾಗಣಪತಿ, ಅಗಸ್ತೇಶ್ವರ ದೇವಾಲಯಗಳಿಗೆ ಹೂವಿನ ಅಲಂಕಾರ ಮಾಡಲಾಗಿದೆ.ವಿಶೇಷ ಬಸ್ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.