ಮಂಡ್ಯ: ಸಂಸದೆ ಎ.ಸುಮಲತಾ ಹಾಗೂ ಅವರ ಬೆಂಬಲಿಗರು ರೈತರಿಂದ ನೇರವಾಗಿ ₹ 2.5 ಲಕ್ಷ ಮೌಲ್ಯದ ಹಣ್ಣು, ತರಕಾರಿ ಖರೀದಿ ಮಾಡಿದ್ದು ಗುರುವಾರ ನಿಯಂತ್ರಿತ ವಲಯಗಳ ನಿವಾಸಿಗಳು ಹಾಗೂ ಬಡ ಕಾರ್ಮಿಕರಿಗೆ ವಿತರಣೆ ಮಾಡಿದರು.

ನಗರದ ಸ್ವರ್ಣಸಂದ್ರ ಬಡಾವಣೆ, ಮಳವಳ್ಳಿಯ ಈದ್ಗಾ ಮೊಹಲ್ಲಾ, ಕೋಟೆ ಬೀದಿಗೆ ಭೇಟಿ ನೀಡಿ ಜನರಿಗೆ ಹಣ್ಣು, ತರಕಾರಿ ವಿತರಣೆ ಮಾಡಿ ಧೈರ್ಯ ತುಂಬಿದರು. ಬಡವರಿಗಾಗಿ 5 ಟನ್ ದೊಣಮೆಣಸಿನಕಾಯಿ, 10 ಟನ್ ಕುಂಬಳಕಾಯಿ, 15 ಟನ್ ಎಲೆ ಕೋಸು, 15 ಟನ್ ಕಲ್ಲಂಗಡಿ ಹಣ್ಣು ಖರೀದಿ ಮಾಡಲಾಗಿದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.

ಮತ್ತೆ 50 ಟನ್ ಎಲೆ ಕೋಸು, 50 ಟನ್ ಟೊಮೆಟೊ, 50 ಟನ್ ಬಾಳೆಹಣ್ಣು ಖರೀದಿ ಮಾಡಿ ಬಡವರಿಗೆ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಂಸದರ ನಿಧಿಗೆ ತಡೆ: ‘ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ ತುರ್ತು ಪರಿಸ್ಥಿತಿ ವಾತಾವರಣ ಇದೆ. ಹೀಗಾಗಿ ದೇಶದ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ನಂತರ ನಿಧಿ ಸಂಸದರಿಗೆ ದೊರೆಯುತ್ತದೆ. ಆಗ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.