ಕಲಬುರ್ಗಿ: ಇಲ್ಲಿನ ಕೈಲಾಸ ನಗರ ದಲ್ಲಿ ಗುರುವಾರ 18 ಅಡಿ ಆಳದ ಮ್ಯಾನ್‌ಹೋಲ್‌ಗೆ ಇಳಿದಿದ್ದ ಇಬ್ಬರು ಪೌರಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಮೂವರೂ ಒಂದೇ ಕುಟುಂಬದವರು.

ಆಜಾದ್‌ಪುರ ರಸ್ತೆ ಪ್ರದೇಶದ ನಿವಾಸಿಗಳಾದ ಲಾಲ್ ಅಹಮದ್ (30) ಮತ್ತು ರಶೀದ್ ಅಹಮದ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಜ್ ಅಹಮದ್ (21)
ಅವರನ್ನು ಖಾಸಗಿ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಈ ಮೂವರೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿಗುತ್ತಿಗೆ ಪೌರ ಕಾರ್ಮಿಕರು (ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್). ಮೃತರ ತಂದೆ ಬುರಾನ್ ಶೇಖ್ ಕೂಡ ಮಂಡಳಿ ಯ ಕಾರ್ಮಿಕರಾಗಿದ್ದಾರೆ.

ಕೈಲಾಸ್ ನಗರದ ಒಳ ಚರಂಡಿಯಲ್ಲಿನ ದುರಸ್ತಿ ಕಾರ್ಯ ಕ್ಕಾಗಿ ಮಧ್ಯಾಹ್ನ ಮೂವರನ್ನೂ ಮ್ಯಾನ್‌ಹೋಲ್ ಮೂಲಕ ಒಳಗೆ ಇಳಿಸಲಾಗಿತ್ತು. ಕೆಲ ಹೊತ್ತಿನಲ್ಲೇ ಉಸಿರಾಡಲಾಗದೇ ಅವರು ಕುಸಿದುಬಿದ್ದರು. ಸ್ವಲ್ಪ ಹೊತ್ತಿನ ನಂತರ ಮೇಲಿದ್ದವರು ಕೂಗಿದರೂ ಪ್ರತಿಕ್ರಿಯಿಸಲಿಲ್ಲ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಒಳಚರಂಡಿ ಸುತ್ತಲಿನ ಜಾಗವನ್ನು ಜೆಸಿಬಿಯಿಂ ದ ಅಗೆದು, ಅಲ್ಲಿಂದ ಮೂವರ ನ್ನೂ ಹೊರತೆಗೆದು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.