ಮೈಸೂರು: ರೆಸಾರ್ಟ್ವೊಂದರಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಸಭೆ ನಡೆಸಿರುವ ಕುರಿತು ಮಾಹಿತಿ ಇಲ್ಲ. ಒಂದು ವೇಳೆ ಸಭೆ ನಡೆಸಿದ್ದರೆ ಅದು ತಪ್ಪಲ್ಲ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಒಂದೂವರೆ ತಿಂಗಳುಗಳಿಂದ ಲಾಕ್ಡೌನ್ನಿಂದ ಅವರು ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಕ್ಷೇತ್ರದ ಸಮಸ್ಯೆ ಕುರಿತು ಚರ್ಚಿಸಲು ಒಟ್ಟಿಗೆ ಸಭೆ ಸೇರಿರಬಹುದು. ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣಾ ವಿಷಯವೂ ಇದೇ ವೇಳೆ ಚರ್ಚೆಗೆ ಬಂದಿದ್ದರೆ ಅದೂ ತಪ್ಪಲ್ಲ. ಮಾಧ್ಯಮದವರು ಎಲ್ಲವನ್ನೂ ತಿರುಚುವ ಪ್ರಯತ್ನ ನಡೆಸಿದ್ದಾರೆ ಎಂದು ಹರಿಹಾಯ್ದರು.

ಬೆಳಗಾವಿಯಲ್ಲಿ ಶುರುವಾದರೆ, ಬೆಳಗಾವಿಯಲ್ಲೇ ಮುಗಿಯುತ್ತದೆ. ಇದು ಮುಂದುವರಿಯುವುದಿಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಉಮೇಶ್ ಕತ್ತಿ ಅವರದ್ದು ವಿಶಿಷ್ಟವಾದ ಮಾತಿನ ಶೈಲಿ. ಯಾವುದೇ ಭಿನ್ನಾಭಿಪ್ರಾಯ ಪಕ್ಷದಲ್ಲಿ ಇಲ್ಲ. ಅವರು ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದು ಹೇಳಿದರು.

ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸ್ಥಾನ ಕೊಡಿಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.