ಬೆಂಗಳೂರು: ಬರಪೀಡಿತ ತಾಲ್ಲೂಕುಗಳಲ್ಲಿ ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮುಂದುವರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ₹80 ಕೋಟಿ ಹಣ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ.

ಅನ್ನದಾಸೋಹ ಯೋಜನೆಗೆ ರಾಜ್ಯ ಸರ್ಕಾರ ಶೇ 40ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ 60ರಷ್ಟು ಹಣ ಭರಿಸುತ್ತಿವೆ. ಬರಪೀಡಿತ 233 ತಾಲ್ಲೂಕುಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಏ.14ರಿಂದ 41 ದಿನಗಳು ಮಧ್ಯಾಹ್ನ ಬಿಸಿಯೂಟ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಕೇಂದ್ರದ ಪಾಲು ನೀಡಲು ಕೋರಿಕೆ ಸಲ್ಲಿಸಿದೆ.

‘ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಬಿಸಿಯೂಟ ಯೋಜನೆಗೆ ಹಣಕಾಸಿನ ನೆರವು ನೀಡಿತ್ತು. ಈಗ ರಾಜ್ಯ ಬರಗಾಲಕ್ಕೆ ಒಳಗಾಗುದೆ. ಅದಕ್ಕಾಗಿ ಕೇಂದ್ರದ ನೆರವು ಕೋರಲಾಗಿದೆ. ಬಿಸಿಯೂಟ ವಿಸ್ತರಣೆಯಿಂದ ಶೇ 40ರಷ್ಟು ಮಕ್ಕಳು ಪ್ರಯೋಜನ ಪಡೆಯುವ ನಿರೀಕ್ಷೆ ಇದೆ. ಮಕ್ಕಳು ರಜೆಗೆ ಬೇರೆ ಊರುಗಳಿಗೆ ತೆರಳಿದರೂ, ಹತ್ತಿರದ ಶಾಲೆಗಳಲ್ಲಿ ಊಟದ ಸೌಲಭ್ಯ ಪಡೆಯಬಹುದು. ಈ ಸಮಯದಲ್ಲಿ ಕ್ಷೀರ ಭಾಗ್ಯ ಯೋಜನೆ ಇರುವುದಿಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.