ಮಂಗಳೂರು: ‘ತುಮಕೂರು ಕ್ಷೇತ್ರದ ತುಮಕೂರು ಲೋಕಸಭಾ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ಯಾರಿಂದಲೂ ಕೂಡ ಯಾರಿಂದಲೂ ಕೂಡ ನಯಾಪೈಸೆ ಹಣವನ್ನು ಪಡೆದಿಲ್ಲ. ಕೆಲವು ಅನಾಮಧೇಯ ವ್ಯಕ್ತಿಗಳು ಮಾಡಿರುವ ಆಡಿಯೋ ಸಂಭಾಷಣೆ ನನ್ನ ಚಾರಿತ್ರ್ಯವಧೆ ಮಾಡುವ ಹುನ್ನಾರವಾಗಿದೆ. ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಇದನ್ನು ಸ್ಪಷ್ಟಪಡಿಸುತ್ತಿದ್ದೇನೆ,'ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಮುದ್ದು ಹನುಮೇಗೌಡ ಅವರು ಗುರುವಾರ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಮಾಧ್ಯಮಗಳಿಗೆಸ್ಪಷ್ಟಪಡಿಸಿದರು.

‘ನಾನು ನ್ಯಾಯಾಂಗ ವ್ಯವಸ್ಥೆಯಿಂದ ರಾಜಕೀಯಕ್ಕೆ ಅನಿವಾರ್ಯವಾಗಿ ಬಂದವನು. ಕುಣಿಗಲ್ ಕ್ಷೇತ್ರದ ಶಾಸಕನಾಗಿ ಹಾಗೂ ತುಮಕೂರು ಕ್ಷೇತ್ರದ ಸಂಸದನಾಗಿ ಜನರೊಟ್ಟಿಗಿದ್ದು ಕೆಲಸ ಮಾಡಿದ್ದೇನೆ. ಮೈತ್ರಿ ಧರ್ಮವನ್ನು ಪಾಲಿಸುವ ಉದ್ದೇಶದಿಂದ ನಾಮಪತ್ರವನ್ನು ವಾಪಸ್ ಪಡಬೇಕಾಯಿತು. ಪತ್ರ ವಾಪಸ್ ಪಡೆಯಲು ಕೋಟಿಗಟ್ಟಲೆ ಡೀಲ್ ಆಗಿದೆ ಎಂಬುದು ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ,’ ಎಂದರು.

‘ಆರೋಪದ ಬಗ್ಗೆ ದೊಡ್ಡ ಮಟ್ಟದ ವ್ಯಕ್ತಿಗಳು ಸ್ಪಷ್ಟನೆನೀಡಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಈ ಕಾರಣಕ್ಕಾಗಿಯೇ ನಾನು ಯಾರಿಂದಲೂ ಬಿಡಿಗಾಸನ್ನು ಪಡೆದಿಲ್ಲ ಎಂಬುದನ್ನು ಧರ್ಮಸ್ಥಳದಲ್ಲಿ ನಿಂತು ಸ್ಪಷ್ಟಪಡಿಸುತ್ತಿದ್ದೇನೆ,’ ಎಂದು ಮುದ್ದ ಹನುಮೇಗೌಡ ಹೇಳಿದರು.

‘ನಾನೊಬ್ಬ ಕಾಂಗ್ರೆಸ್ ವ್ಯಕ್ತಿಯಾಗಿ ಕೆಲಸ ಮಾಡಿದ್ದೇನೆ, ಮೈತ್ರಿ ಧರ್ಮ ಪಾಲನೆ ಉದ್ದೇಶದಿಂದ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದೇನೆ. ಡೀಲ್ ಪ್ರಕರಣದ ಸಂಭಾಷಣೆಯ ಬಗ್ಗೆ ಪಕ್ಷದ ಮುಖಂಡರಾದ ಗುಂಡೂರಾವ್, ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷ ನನ್ನ ಪರವಾಗಿ ನಿಂತಿದ್ದಾರೆ,’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.