ಬೆಂಗಳೂರು: ರೈತರಿಗೆ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತಗೊಳಿಸಿದ್ದರಿಂದಾಗಿ ರಾಜ್ಯದಲ್ಲಿ ಕೃಷಿ ಸಾಲ ವಿತರಣೆಗೆ ಹಣದ ಕೊರತೆ ಎದುರಾಗಿದೆ.

ನಬಾರ್ಡ್ನ ಈ ನಡೆಯಿಂದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಸಹಕಾರ ಇಲಾಖೆಯ ಮೂಲಗಳು ತಿಳಿಸಿವೆ.

ರೈತ ವರ್ಗವನ್ನು ಉತ್ಪಾದನಾ ವಲಯಕ್ಕೆ ಸೇರ್ಪಡೆ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕೂ ತೊಂದರೆ ಆಗಬಹುದು ಎಂದೂ ಮೂಲಗಳು ಹೇಳಿವೆ.

ರಾಜ್ಯ ಸರ್ಕಾರವು ಎಲ್ಲ 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳ (ಎಲ್ಲ 31 ಜಿಲ್ಲೆಗಳನ್ನು ಒಳಗೊಂಡು) ಮೂಲಕ ಪ್ರತಿ ಸಾಲಿನಂತೆ 2024–25ನೇ ಸಾಲಿಗೆ 35.10 ಲಕ್ಷ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. ಸಾಲ ನೀಡಲು ₹22,902 ಕೋಟಿಯಷ್ಟಾದರೂ ಬೇಕಾಗಬಹುದು ಎಂದು ಜಿಲ್ಲಾ ಬ್ಯಾಂಕುಗಳು ಅಂದಾಜಿಸಿವೆ.

ರೈತರಿಗೆ ಕೃಷಿ ಸಾಲವನ್ನು ಸಮರ್ಪಕವಾಗಿ ವಿತರಿಸುವ ಉದ್ದೇಶದಿಂದ ಈ ಒಟ್ಟು ಸಾಲದಲ್ಲಿ ಶೇ 60ರಷ್ಟು ಅಂದರೆ ₹13,742 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ಮಂಜೂರು ಮಾಡುವಂತೆ ಕೋರಿ ನಬಾರ್ಡ್ಗೆ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಏಪ್ರಿಲ್ 22ರಂದು ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಸೆ. 24ರಂದು ಪತ್ರ ಬರೆದ ನಬಾರ್ಡ್ ₹13,742 ಕೋಟಿಯ ಪೈಕಿ ₹4,580 ಕೋಟಿಯನ್ನು ಹೆಚ್ಚುವರಿ ಬಡ್ಡಿ ದರದಲ್ಲಿ (ಶೇ 8) ಸಾಲ ಮಂಜೂರು ಮಾಡಿದೆ. ಡಿಸಿಸಿ ಬ್ಯಾಂಕುಗಳ ಪರವಾಗಿ ಅಪೆಕ್ಸ್ ಬ್ಯಾಂಕಿಗೆ ರಿಯಾಯಿತಿ ಬಡ್ಡಿ ದರದಲ್ಲಿ (ಶೇ 4.50) ₹2,340 ಕೋಟಿ ಹಂಚಿಕೆ ಮಾಡಿದೆ. ಆ ಮೂಲಕ, ₹6,822 ಕೋಟಿ ಕಡಿಮೆ ಮಂಜೂರು ಮಾಡಿದೆ. ಇದರಿಂದಾಗಿ ಕೃಷಿ ಸಾಲ ನೀಡಲು ಹಣದ ಕೊರತೆಯಾಗಲಿದೆ.

‘2023–24ನೇ ಸಾಲಿನಲ್ಲಿ ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ₹5,600 ಕೋಟಿ ಮಂಜೂರು ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ₹2,340 ಕೋಟಿ ಮಾತ್ರ ಮಂಜೂರು ಮಾಡಿದೆ. ಈ ಮಿತಿಯು ಹಿಂದಿನ ವರ್ಷದ ಮಂಜೂರಾತಿಯ ಶೇ 42ರಷ್ಟಿದ್ದು, ಪ್ರಸಕ್ತ ಸಾಲಿನ ಬೇಡಿಕೆಯ ಶೇ 58ರಷ್ಟು ಇಳಿಕೆಯಾಗಿದೆ. ಬ್ಯಾಂಕುಗಳ ಆರ್ಥಿಕ ಸ್ಥಿತಿಗತಿಯ ಮೇಲೆ ವ್ಯತಿರಿಕ್ತ ಪರಿಣಾಮದ ಜತೆಗೆ, ಈಗಾಗಲೇ ಪಡೆದಿರುವ ಸಾಲಗಳನ್ನು ಮರುಪಾವತಿಸಲು ಕೂಡಾ ಕಷ್ಟವಾಗಲಿದೆ’ ಎಂದು ಅಪೆಕ್ಸ್ ಬ್ಯಾಂಕಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ವ್ಯವಸಾಯ ಚಟುವಟಿಕೆ ಈಗಾಗಲೇ ಚುರುಕುಗೊಂಡಿದ್ದು, ರೈತರಿಗೆ ಸಂಬಂಧಿಸಿದ ಬೀಜ, ಗೊಬ್ಬರ ಮತ್ತು ಇತರ ಅವಶ್ಯಗಳಿಗೆ ಹಣಕಾಸಿನ ಅಗತ್ಯವಿದೆ. ನಬಾರ್ಡ್ನಿಂದ ರಿಯಾಯಿತಿ ಬಡ್ಡಿ ದರದ ಕೃಷಿ ಸಾಲ ಮಿತಿ ಗಣನೀಯವಾಗಿ ಕಡಿಮೆ ಆಗಿರುವುದರಿಂದ ರೈತರಿಗೆ ಅವಶ್ಯವಾದ ಸಾಲ ಸೌಲಭ್ಯಕ್ಕೆ ಸಂಪನ್ಮೂಲದ ಕೊರತೆ ಉಂಟಾಗಲಿದೆ’ ಎಂದೂ ಅವರು ಹೇಳಿದರು.

ಡಿಸಿಸಿ ಬ್ಯಾಂಕು– ಸಾಲದ ಹೊರೆ!

‘ರೈತರಿಗೆ 2023–24ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲವಾಗಿ ಒಟ್ಟು ₹ 22,077.20 ಕೋಟಿ ವಿತರಿಸಲಾಗಿದೆ. ಈ ಸಂಬಂಧ ಡಿಸಿಸಿ ಬ್ಯಾಂಕುಗಳು ನಬಾರ್ಡ್ ಮತ್ತು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿಗೆ ಪ್ರಸಕ್ತ ವರ್ಷದಲ್ಲಿ ₹ 10,525.48 ಕೋಟಿ ಮರು ಪಾವತಿಸಬೇಕಿದೆ. ಆ ಮೂಲಕ, ರಾಜ್ಯದ ಡಿಸಿಸಿ ಬ್ಯಾಂಕುಗಳು ಸಾಲದ ಹೊರೆ ಹೊತ್ತುಕೊಂಡಿದ್ದು, 2024–25ನೇ ಸಾಲಿನಲ್ಲಿ ನಬಾರ್ಡ್ ಹೆಚ್ಚಿನ ಮೊತ್ತದ ಸಾಲ ನೀಡುವ ನೆರವಿಗೆ ನಿಲ್ಲದೇ ಇದ್ದರೆ ಈ ಬ್ಯಾಂಕುಗಳ ಆರ್ಥಿಕ ಸ್ಥಿತಿ ಇನ್ನಷ್ಟು ಹದಗೆಡಲಿದೆ. ಅಷ್ಟೇ ಅಲ್ಲ, ಕೆಲವು ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳು ಮುಚ್ಚುವ ಸ್ಥಿತಿ ತಲುಪುವ ಸಾಧ್ಯತೆಯೂ ಇದೆ’ ಎಂದು ಅಪೆಕ್ಸ್ ಬ್ಯಾಂಕಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಿರ್ಮಲಾ, ಸಿ.ಎಂಗೆ ಬೆಳ್ಳಿ ಪ್ರಕಾಶ್ ಪತ್ರ

‘2024–25ನೇ ಸಾಲಿನಲ್ಲಿ ಕೃಷಿ ನಿರ್ವಹಣೆಯ ಹಂಗಾಮಿಗೆ ನಬಾರ್ಡ್ನಿಂದ ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ಮಿತಿಯನ್ನು ಗಣನೀಯವಾಗಿ ಕಡಿಮೆ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ತೀವ್ರ ಹಣಕಾಸಿನ ಸಮಸ್ಯೆ ಎದುರಾಗಿದೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಕಡಿತ ಮಾಡಿದ್ದರಿಂದಾಗಿ, ಕೃಷಿ ಸಾಲ ವಿತರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಅಪೆಕ್ಸ್ ಬ್ಯಾಂಕ್ ಸಲ್ಲಿಸಿದ ಪ್ರಸ್ತಾವಕ್ಕೆ ಅನುಗುಣವಾಗಿ ರಿಯಾಯಿತಿ ಬಡ್ಡಿ ದರದಲ್ಲಿ ಹೆಚ್ಚಿನ ಪ್ರಮಾಣದ ಸಾಲವನ್ನು ಮಂಜೂರು ಮಾಡುವಂತೆ ನಬಾರ್ಡ್ಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದೂ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.