ಬೆಂಗಳೂರು: ಕರ್ನಾಟಕದಲ್ಲಿ ‘ನಂದಿನಿ’ ಬ್ರ್ಯಾಂಡ್ ಜೊತೆಗೆ ‘ಅಮೂಲ್‘ ಉತ್ಪನ್ನಗಳ ಮಾರಾಟದ ವಿವಾದ ತಣ್ಣಗಾದ ಬೆನ್ನಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಭಾನುವಾರ ರಾಜ್ಯಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು ಬೆಂಗಳೂರಿನ ಅಂಗಡಿಯೊಂದರಲ್ಲಿ ನಂದಿನಿ ಐಸ್ ಕ್ರೀಮ್ ಖರೀದಿಸಿ ಸವಿದಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇದ್ದರು.

ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ, ನಂದಿನಿ ಅತ್ಯುತ್ತಮವಾದುದು ಎಂದು ರಾಹುಲ್ ಗಾಂಧಿ ಫೋಟೊ ಟ್ವೀಟ್ ಮಾಡಿದ್ದರು.

ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೇರಳದಲ್ಲಿ ನಂದಿನಿ ಮಾರಾಟ ಸುಗಮವಾಗಬೇಕು. ಈ ಬಗ್ಗೆ ನೀವು ಮಧ್ಯಪ್ರವೇಶಿಸಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಅಮೂಲ್ ಬ್ರ್ಯಾಂಡ್‌ನ ಹಾಲು, ಮೊಸರು ಮಾರಾಟ ಪ್ರಕ್ರಿಯೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಲವಾಗಿ ಖಂಡಿಸಿದ್ದವು. ನಂತರ ‘ಅಮೂಲ್ ಉತ್ಪನ್ನಗಳು ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂದು ಅಮೂಲ್ ಸಂಸ್ಥೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.