ಬೆಂಗಳೂರು: ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 15 ಅಭ್ಯರ್ಥಿಗಳಲ್ಲಿ 13 ಮಂದಿ ಭಾನುವಾರ ವಿಧಾನಸೌಧದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮಾಣವನ್ನು ಬೋಧಿಸಿ, ಎಲ್ಲರಿಗೂ ಸಂವಿಧಾನದ ಪ್ರತಿಗಳನ್ನು ನೀಡಿದರು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಹುಣಸೂರು ಕ್ಷೇತ್ರದ ಎಚ್.ಪಿ.ಮಂಜುನಾಥ್, ಶಿವಾಜಿನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್ ಭಾಗವಹಿಸಿರಲಿಲ್ಲ.

ಪ್ರಮಾಣ ಸ್ವೀಕರಿಸಿದವರು: ಮಹೇಶ ಕುಮಠಳ್ಳಿ– ಅಥಣಿ, ಶ್ರೀಮಂತ ಪಾಟೀಲ– ಕಾಗವಾಡ, ರಮೇಶ ಜಾರಕಿಹೊಳಿ– ಗೋಕಾಕ, ಶಿವರಾಮ್ ಹೆಬ್ಬಾರ್– ಯಲ್ಲಾಪುರ, ಬಿ.ಸಿ.ಪಾಟೀಲ– ಹಿರೇಕೆರೂರು, ಅರುಣ್ ಕುಮಾರ್ ಗುತ್ತೂರು– ರಾಣೆಬೆನ್ನೂರು, ಆನಂದ ಸಿಂಗ್– ವಿಜಯನಗರ, ಡಾ.ಕೆ.ಸುಧಾಕರ್– ಚಿಕ್ಕಬಳ್ಳಾಪುರ, ಬೈರತಿ ಬಸವರಾಜ್– ಕೃಷ್ಣರಾಜಪುರ, ಎಸ್.ಟಿ.ಸೋಮಶೇಖರ್– ಯಶವಂತಪುರ, ಕೆ.ಗೋಪಾಲಯ್ಯ– ಮಹಾಲಕ್ಷ್ಮಿಲೇಔಟ್, ಎಂ.ಸಿ.ನಾರಾಯಣಗೌಡ– ಕೆ.ಆರ್.ಪೇಟೆ (ಎಲ್ಲರೂ ಬಿಜೆಪಿ), ಹೊಸಕೋಟೆ– ಶರತ್ ಬಚ್ಚೇಗೌಡ (ಪಕ್ಷೇತರ).

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಎಸ್.ಸುರೇಶ್ ಕುಮಾರ್, ಎಚ್.ನಾಗೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.