ಬೆಂಗಳೂರು:ವಾಹನ ಸವಾರರೇ ಎಚ್ಚರ, ನಗರದಲ್ಲಿ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ದಂಡ ತೆರಬೇಕಾದೀತು.

ಈಗಾಗಲೆ ಮಂಗಳವಾರ ರಾತ್ರಿ ಹೊಸ ಕಾನೂನಿನ ಅನ್ವಯ ಸಂಚಾರ ಪೊಲೀಸರು ಅಧಿಕ ಮೊತ್ತದ ದಂಡ ವಿಧಿಸಿದ್ದಾರೆ.ಈ ಸಂಬಂಧ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಮದ್ಯ ಸೇವಿಸಿ ಬೈಕ್ ಚಲಾಯಿಸಿದ ವ್ಯಕ್ತಿಗೆ₹ 10 ಸಾವಿರ, ಹೆಲ್ಮೆಟ್ ಧರಿಸದ ವ್ಯಕ್ತಿಗೆ₹ 2 ಸಾವಿರ, ಮತ್ತೊಬ್ಬ ವ್ಯಕ್ತಿಗೆ₹ 17 ಸಾವಿರ ದಂಡ ವಿಧಿಸಿದ್ದಾಗಿ ತಿಳಿಸಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸಿದ ವ್ಯಕ್ತಿಯಿಂದ₹ 5 ಸಾವಿರ ದಂಡ ವಸೂಲು ಮಾಡಲಾಗಿದೆ. ಇದು ವಾಹನ ಸವಾರರಲ್ಲಿ ಒಂದು ಬಗೆಯ ಜಾಗೃತಿ ಮೂಡಿಸಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.