ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬೇರೆ ಪಕ್ಷದ ಶಾಸಕರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಇಬ್ಬರು ಪಕ್ಷೇತರರು ಸೇರಿದಂತೆ ನಾಲ್ಕು ಶಾಸಕರ ಮತಗಳು ನಮ್ಮ ಅಭ್ಯರ್ಥಿಗಳಿಗೆ ಬೀಳಲಿವೆ. ನಮ್ಮ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ' ಎಂದರು.

ಜೆಡಿಎಸ್ ಪಕ್ಷಕ್ಕೆ ಇರುವುದೇ 19 ಶಾಸಕರು. ಹೀಗಿರುವಾಗ ಅವರು ಅಭ್ಯರ್ಥಿ ಕಣಕ್ಕಿಳಿಸಬಾರದಿತ್ತು. ಆದರೂ, ಕಣಕ್ಕಿಳಿಸಿದರು. ಅದ್ದರಿಂದ ನಾವು ಹೋಟೆಲ್ ಗೆ ಹೋಗಿ ಒಟ್ಟಾಗಿ ಮತದಾನಕ್ಕೆ ಬರಬೇಕಾಯಿತು' ಎಂದರು.

'ನಮ್ಮ ಪಕ್ಷದ 134 ಶಾಸಕರ ಜತೆಗೆ ಪಕ್ಷೇತರರಾದ ಲತಾ ಮಲ್ಲಿಕಾರ್ಜುನ, ಕೆ.ಎಚ್. ಪುಟ್ಟಸ್ವಾಮಿ ಗೌಡ, ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಕೂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಲಿದ್ದಾರೆ. ಮೂರೂ ಮಂದಿಯ ಗೆಲುವಿಗೆ ಬೇಕಾಗುವಷ್ಟು ಮತಗಳು ನಮ್ಮ ಬಳಿ ಇವೆ' ಎಂದು ತಿಳಿಸಿದರು.

'ನಾವು ಯಾವುದೇ ಆಸೆ, ಆಮಿಷ ಒಡ್ಡಿಲ್ಲ. ಆ ರೀತಿ ಮಾಡುವುದು ಜೆಡಿಎಸ್ ಪಕ್ಷದವರು' ಎಂದು ವಾಗ್ದಾಳಿ ನಡೆಸಿದರು.

ಆತ್ಮ ಸಾಕ್ಷಿಯ ಮತಗಳು ಬರಲಿವೆ ಎಂಬ ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, 'ಜೆಡಿಎಸ್ ಪಕ್ಷದವರಿಗೆ ಆತ್ಮವೂ ಇಲ್ಲ, ಸಾಕ್ಷಿಯೂ ಇಲ್ಲ' ಎಂದರು
.ಗೆಲುವಿಗಾಗಿ ಅಲ್ಲ, ಒಗ್ಗಟ್ಟಿನ ಪ್ರದರ್ಶನಕ್ಕಾಗಿ ಸ್ಪರ್ಧೆ: ಎಚ್.ಡಿ. ಕುಮಾರಸ್ವಾಮಿ.ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಮತದಾನ ಆರಂಭ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.