ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಬೀಡು ಬಿಟ್ಟಿರುವ ಬಾಂಗ್ಲಾ ದೇಶದವರೂ ಸೇರಿ ಎಲ್ಲ ವಿದೇಶಿಯರ ಮೇಲೆ ಕಣ್ಣಿಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಲ್ಲಿ ಬಾಂಗ್ಲಾದೇಶಿಯರು ನೆಲೆಸಿದ್ದಾರೆ ಎಂಬುದನ್ನು ಪತ್ತೆ ಮಾಡಿ, ಅವರ ಪೂರ್ವಾಪರಗಳ ಮಾಹಿತಿ ಸಂಗ್ರಹಿಸಲಾಗುವುದು. ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು. ಅಲ್ಲದೆ, ಪ್ರತಿಯೊಂದು ಪೊಲೀಸ್ ಠಾಣೆಗಳೂ ತಮ್ಮ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿಗರ ಬಗ್ಗೆ ನಿಗಾ ಇಡಲು ಸೂಚಿಸಲಾಗುವುದು ಎಂದರು.

‘ಕೆಲವು ಬಿಲ್ಡರ್ಗಳು ಮತ್ತು ಉದ್ಯಮಿಗಳು ಕಡಿಮೆ ಕೂಲಿ ಪಡೆಯುತ್ತಾರೆ ಎಂಬ ಕಾರಣಕ್ಕೆ ಬಾಂಗ್ಲಾ ದೇಶದಿಂದ ಕಾರ್ಮಿಕರನ್ನು ಕರೆ ತರುತ್ತಿದ್ದಾರೆ’ ಎಂದು ಹೇಳಿದರು.ಬೆಂಗಳೂರಿನಲ್ಲಿ ಇತ್ತೀಚೆಗೆ ಬಾಂಗ್ಲಾದೇಶ ಮತ್ತು ನೇಪಾಳದಿಂದ ಬಂದಿರುವವರು ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದುಕಂಡು ಬಂದಿದೆ. ಇವರ ಮೇಲೆ ಕಣ್ಣಿಡಲಾಗುವುದು ಎಂದೂ ಅವರು ಹೇಳಿದರು.

ಬಂಧನ ಕೇಂದ್ರ ಯಾವುದಕ್ಕೆ?: ವಿಸಾ ಅವಧಿ ಮುಗಿದ ಬಳಿಕವೂ ಇಲ್ಲೇ ಉಳಿದು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ನೈಜೀರಿಯಾ ಮತ್ತಿತರ ದೇಶಗಳ ಅಕ್ರಮ ವಲಸಿಗರನ್ನು ಇರಿಸಲು ಬಂಧನ ಕೇಂದ್ರವನ್ನು (ಡಿಟೆನ್ಷನ್ ಸೆಂಟರ್) ಆರಂಭಿಸಲಾಗಿದೆ. ಆದರೆ, ಇದರ ಬಗ್ಗೆ ವಿರೋಧಪಕ್ಷಗಳು ಅಪಪ್ರಚಾರ ನಡೆಸುತ್ತಿವೆಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.