ಲಿಂಗಾಯತ ಧರ್ಮ ಹೋರಾಟ ನಿಂತಿಲ್ಲ. ಪುನಃ ಸ್ಫೋಟಿಸಲಿದೆ. ಈ ಸಿದ್ಧಾಂತ ಆಶಾವಾದಿಯಾಗಿದ್ದು, ನಿರಾಸೆ ಎಂಬುದು ಇಲ್ಲ. ಎಲ್ಲ ಬಸವ ಭಕ್ತರಿಗೆ ಬಸವಣ್ಣನೇ ಗುರು, ವಚನ ಸಾಹಿತ್ಯವೇ ಗ್ರಂಥ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು. ಕೂಡಲಸಂಗಮ ಬಸವ ಧರ್ಮಪೀಠ ಆವರಣದಲ್ಲಿ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮ, ಸರ್ಕಾರ ಮಾನ್ಯತೆ ಕೊಡಬೇಕು ಎಂದು ರಾಜ್ಯದ ಪ್ರತಿ ಗ್ರಾಮಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಾವೆಲ್ಲರೂ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.