ಬೆಂಗಳೂರು: ದುಬಾರಿ ದರದ (ಪ್ರೀಮಿಯಂ) ಬ್ರ್ಯಾಂಡ್ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಮಂಗಳವಾರದಿಂದಲೇ ಪ್ರೀಮಿಯಂ ಬ್ರ್ಯಾಂಡ್ಗಳ ಮದ್ಯದ ದರದಲ್ಲಿ ಶೇಕಡ 15ರಿಂದ ಶೇ 20ರಷ್ಟು ಇಳಿಕೆಯಾಗಲಿದೆ.

ದುಬಾರಿ ಬೆಲೆಯ ಮದ್ಯದ ದರಗಳನ್ನು ನೆರೆಯ ರಾಜ್ಯಗಳಿಗೆ ಸರಿಸಮನಾಗಿ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024–25ರ ಬಜೆಟ್ನಲ್ಲಿ ಪ್ರಕಟಿಸಿದ್ದರು. ಜೂನ್ನಲ್ಲೇ ಕರಡು ಅಧಿಸೂಚನೆ ಹೊರಡಿಸಿದ್ದ ಅಬಕಾರಿ ಇಲಾಖೆ, ಜುಲೈ 1ರಿಂದ ದರ ಇಳಿಕೆಗೆ ಮುಂದಾಗಿತ್ತು. ಆರ್ಥಿಕ ಇಲಾಖೆಯ ಸೂಚನೆಯಂತೆ ದರ ಪರಿಷ್ಕರಣೆ ತಡೆ ಹಿಡಿಯಲಾಗಿತ್ತು.

ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿರುವ ಅಬಕಾರಿ ಇಲಾಖೆ, ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಪರಿಷ್ಕರಿಸಿ ಆಗಸ್ಟ್ 23ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಮಂಗಳವಾರದಿಂದ (ಆ.27) ಪರಿಷ್ಕೃತ ದರಗಳು ರಾಜ್ಯದಾದ್ಯಂತ ಜಾರಿಗೆ ಬರಲಿವೆ.

ಸ್ಲ್ಯಾಬ್ಗಳ ಸಂಖ್ಯೆ ಇಳಿಕೆ: ರಾಜ್ಯದಲ್ಲಿ ಈವರೆಗೆ 18 ಸ್ಲ್ಯಾಬ್ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಸ್ಲ್ಯಾಬ್ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ.

ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ ₹ 449 ಮೊದಲ ಸ್ಲ್ಯಾಬ್ನಲ್ಲಿದ್ದರೆ, ₹ 15,001ರಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಸ್ಲ್ಯಾಬ್ನಲ್ಲಿಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್ನ ಘೋಷಿತ ಉತ್ಪಾದನಾ ದರ ₹ 450 ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್ನಲ್ಲಿದ್ದರೆ, ₹ 20,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್ಗೆ ಸೇರಿಸಲಾಗಿದೆ.

‘ಐದರಿಂದ 16ನೇ ಸ್ಲ್ಯಾಬ್ವರೆಗಿನ ಮದ್ಯದ ದರಗಳಲ್ಲಿ ಇಳಿಕೆಯಾಗಲಿದೆ. ಅಂದಾಜಿನ ಪ್ರಕಾರ, ಈವರೆಗಿನ ದರಕ್ಕೆ ಹೋಲಿಸಿದರೆ ಶೇ 15ರಿಂದ ಶೇ 20ರಷ್ಟು ದರ ಇಳಿಕೆ ಆಗಲಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.