ಬೆಂಗಳೂರು; ಗಣಪತಿ ಹಬ್ಬ ಹತ್ತಿರವಾಗುತ್ತಿದ್ದು, ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಏಕಾಏಕಿ ಏರಿಕೆ ಮಾಡಲಾಗಿದೆ. ವಿಮಾನಕ್ಕಿಂತಲೂ ಖಾಸಗಿ ಬಸ್ ಪ್ರಯಾಣ ದರವೇ ಹೆಚ್ಚಿದೆ.

ನಗರದಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು, ಗಣಪತಿ ಹಬ್ಬದಂದು ತಮ್ಮೂರಿಗೆ ಹೋಗಲು ತಯಾರಿ ಮಾಡಿಕೊಂಡಿದ್ದಾರೆ. ಹಬ್ಬದ ರಜೆಯೂ ಸೇರಿ ಶುಕ್ರವಾರದಿಂದ ಸರಣಿ ರಜೆಗಳಿವೆ. ಹೀಗಾಗಿ, ಗುರುವಾರ ರಾತ್ರಿಯಿಂದಲೇ ಹೆಚ್ಚಿನವರು ಊರಿಗೆ ಪ್ರಯಾಣಿಸುವ ಸಾಧ್ಯತೆ ಇದೆ.

ಬೆಂಗಳೂರಿನಿಂದ ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಮಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ನಗರಗಳಿಗೆ ಹೋಗುವ ಖಾಸಗಿ ಬಸ್‌ಗಳ ದರವನ್ನು ಏರಿಕೆ ಮಾಡಲಾಗಿದೆ.

ಸಾಮಾನ್ಯ ದಿನಗಳಲ್ಲಿ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಬಸ್‌ಗಳಿಗೆ ಅನುಗುಣವಾಗಿ ₹ 450ರಿಂದ ₹1,200 ಪ್ರಯಾಣ ದರವಿರುತ್ತಿತ್ತು. ಆದರೆ, ಗುರುವಾರ (ಸೆ. 9) ಹಾಗೂ ಶುಕ್ರವಾರದಂದು (ಸೆ. 10) ಕನಿಷ್ಠ ₹850ರಿಂದ ಗರಿಷ್ಠ ₹7,000ದವರೆಗೂ ಏರಿಕೆ ಆಗಿದೆ. ಅದೇ ದಿನದಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗುವ ವಿಮಾನಗಳ ಪ್ರಯಾಣ ದರ ಕನಿಷ್ಠ ₹2,700 ಹಾಗೂ ಗರಿಷ್ಠ ₹ 4,033 ಇದೆ.

‘ಪ್ರತಿ ಬಾರಿಯಂತೆ ಖಾಸಗಿ ಬಸ್ಸಿನವರು ಈ ಬಾರಿಯೂ ಪ್ರಯಾಣ ದರ ದುಬಾರಿ ಮಾಡಿದ್ದಾರೆ’ ಎಂದು ಖಾಸಗಿ ಕಂಪನಿ ನೌಕರ ಮೋಹನ್ ಹೇಳಿದರು.

ಖಾಸಗಿ ಬಸ್ ಕಂಪನಿಯೊಂದರ ಪ್ರತಿನಿಧಿ, ‘ಲಾಕ್‌ಡೌನ್‌ನಿಂದಾಗಿ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇದೀಗ ಬೇಡಿಕೆ ಇರುವುದರಿಂದ ಪ್ರಯಾಣ ದರ ಏರಿಕೆ ಮಾಡಿದ್ದೇವೆ’ ಎಂದರು.

ಪ್ರಯಾಣ ದರ (ಸೆ. 9, ಬೆಂಗಳೂರಿನಿಂದ)

ನಗರಕ್ಕೆ; ಕನಿಷ್ಠ; ಗರಿಷ್ಠ

ಹುಬ್ಬಳ್ಳಿ; ₹850; ₹ 7,000

ಬೆಳಗಾವಿ; ₹850; ₹7,000

ಮಂಗಳೂರು; ₹925; ₹1799

ಕಲಬುರ್ಗಿ; ₹960; ₹1,499

ವಿಜಯಪುರ; ₹910; ₹2,000

ಶಿವಮೊಗ್ಗ; ₹ 399; ₹1,650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.