ಬೆಂಗಳೂರು: ‘ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ. ಏನು ತಿನ್ನುತ್ತೇನೆ ಎನ್ನುವುದರ ಕಡೆಯೂ ಗಮನ ಇಟ್ಟು ಕೊಂಡರೆ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು....’

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ‘ಮೀಟ್ ದಿ ಗ್ರೇಟ್’ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ನೀಡಿದ ಸರಳ ಸಲಹೆ ಇದು.

‘ಡೆಕ್ಕನ್ ಹೆರಾಲ್ಡ್’ ಕ್ರೀಡಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಲ್ಲಿ ಒಬ್ಬರು ದ್ರಾವಿಡ್‌ಗೆ ಫಿಟ್‌ನೆಸ್‌ಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು.

ಒಬ್ಬ ವಿದ್ಯಾರ್ಥಿನಿ ಸೇರಿ ಏಳು ಮಂದಿ ವಿಜೇತರಿಗೆ ಅವರು ‘ಆಮೇಜಾನ್ ಪೇ ವೌಚರ್’, ಸ್ಮರಣಿಕೆ ನೀಡಿದರು. ಎರಡು ವಾರ ಕಾಲ ನಡೆದ ಈ ಸ್ಪರ್ಧೆಯಲ್ಲಿ 5,200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅದೃಷ್ಟ
ಶಾಲಿಗಳನ್ನು ದ್ರಾವಿಡ್ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.