ಬೆಂಗಳೂರು: ಪ್ರಕರಣವೊಂದರ ವಿಚಾರಣೆಗಾಗಿ ಗುರುವಾರ ನಗರದ ನ್ಯಾಯಾಲಯಕ್ಕೆ ಬಂದಿದ್ದ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ.

ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಭಗವಾನ್ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು.

ನಗರದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಗುರುವಾರ ಇತ್ತು.

ವಿಚಾರಣೆಗೆ ಬರುತ್ತಿದ್ದಂತೆ ಎದುರಾಗಿದ್ದ ವಕೀಲೆ ಮೀರಾ ರಾಘವೇಂದ್ರ ಎಂಬುವರು, ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ.

'ಇಷ್ಟು ವಯಸ್ಸಾಗಿದೆ. ಸದಾ ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರಾ. ನಾಚಿಕೆ ಆಗಲ್ವಾ ನಿಮಗೆ?' ಎಂದು ವಕೀಲೆ ಮೀರಾ ಕೂಗಿ ಹೇಳಿದ್ದಾರೆ.'ನಾನು ಎಲ್ಲದಕ್ಕೂ ಸಿದ್ಧ, ಜೈಲಿಗೆ ಹೋಗಲೂ ಸಿದ್ಧ' ಎಂದು ಮೀರಾ ಹೇಳಿದ್ದಾರೆ. ಮಸಿ ಬಳಿದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಘಟನೆ ನಡೆಯುತ್ತಿದ್ದಂತೆ ಭಗವಾನ್ ಹಾಗೂ ಅವರ ಅಂಗರಕ್ಷಕನನ್ನು ಪೊಲೀಸರು ನ್ಯಾಯಾಲಯದ ಆವರಣದಿಂದ ಕರೆದೊಯ್ದಿದ್ದಾರೆ. ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.