ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ ಪ್ರಕಟಿಸಿದ ನಂತರ ವೈದ್ಯಕೀಯ ಪ್ರಕರಣಗಳಲ್ಲಿ ವರ್ಗಾವಣೆ ಬಯಸಿರುವವರಿಗೆ ಮತ್ತೆ ಅವಕಾಶ ನೀಡಿರುವ ಕಾಲೇಜು ಶಿಕ್ಷಣ ಇಲಾಖೆ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.

ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಗ್ರಂಥಪಾಲಕರು ಹಾಗೂ ಕ್ರೀಡಾ ನಿರ್ದೇಶಕರ ವರ್ಗಾವಣೆಗೆ ಇದೇ ಜೂನ್ 5ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಕಡ್ಡಾಯ ವರ್ಗಾವಣೆ ಶೇ 9, ದಂಪತಿ ಪ್ರಕರಣ ಶೇ 3, ಚಿಕ್ಕ ಮಕ್ಕಳಿರುವ ವಿಧವೆಯರು ಅಥವಾ ಒಂಟಿ ಪೋಷಕರು, ಅಂಗವಿಕಲರು, ತೀವ್ರತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತಲಾ ಶೇ 1ರಷ್ಟು (ಒಟ್ಟು ಶೇ 3) ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಅಮತಿಮ ಆದ್ಯತಾ ಪಟ್ಟಿ ಪ್ರಕಟಿಸಿದ್ದು, ಇದೇ 25ರಿಂದ 28ರವರೆಗೆ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಲಿದೆ.

ಈ ಮಧ್ಯೆ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ 166 ಬೋಧಕರು ವೈದ್ಯಕೀಯ ಪ್ರಕರಣಗಳ ಅಡಿ ಶೇ 1ರಷ್ಟು ನಿಗದಿತ ಮಿತಿಯಡಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರು ಆಯಾ ಜಿಲ್ಲೆಗಳ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣಪತ್ರ ಸಲ್ಲಿಸಿದ್ದರು. ಪ್ರಮಾಣಪತ್ರಗಳ ನೈಜತೆ ದೃಢೀಕರಣಕ್ಕಾಗಿ ಬೆಂಗಳೂರಿನ ಇಂದಿರಾ ನಗರದ ಸಿ.ವಿ.ರಾಮನ್ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ಜಯನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿ ಮರು ತಪಾಸಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಎಲ್ಲರೂ ಮರುಪತಾಸಣೆಗೆ ಒಳಗಾಗಿದ್ದಾರೆ. ಈಗ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರುವುದು ಅನುಮಾನ ಮೂಡಿಸಿದೆ.

‘ನಕಲಿ ಅಂಗವಿಕಲರ ಪ್ರಮಾಣಪತ್ರ ಪಡೆದು ಹಲವರು ಉದ್ಯೋಗ ಪಡೆದಿರುವಂತೆ, ಹಣ ನೀಡಿ ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಪಡೆದು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಪಡೆಯುತ್ತಿದ್ದಾರೆ. ನಕಲಿ ಪ್ರಮಾಣಪತ್ರ ಪಡೆದು ಕಳೆದ ಬಾರಿಯೂ ಶೇ 50ರಷ್ಟು ಕಾಯಿಲೆಯೇ ಇರದವರು ವರ್ಗಾವಣೆ ಪಡೆದರು. ಈ ಬಾರಿ ಜುಲೈ 12ರ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿದ ನಂತರ ವೈದ್ಯಕೀಯ ಪ್ರಕರಣದಲ್ಲಿ ಮಾತ್ರ ಮತ್ತೆ ದಿನಾಂಕ ವಿಸ್ತರಿಸಿರುವುದು ಅನುಮಾನ ಮೂಡಿಸುತ್ತದೆ. ವಂಚನೆಗೆ ಶಿಕ್ಷಣ ಇಲಾಖೆಯೇ ಅವಕಾಶ ಮಾಡಿಕೊಡುತ್ತಿದೆ. ಇದರಿಂದ ನಿಜವಾದ ಸಮಸ್ಯೆ ಇರುವವರಿಗೆ ಅನ್ಯಾಯವಾಗುತ್ತಿದೆ’ ಎಂದು ಕ್ಯಾನ್ಸರ್ನಿಂದ ಬಳಲುತ್ತಿರುವ ಪ್ರಾಧ್ಯಾಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.