ಬೆಂಗಳೂರು: ‘ಸಿ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ವಿಶೇಷ ಪ್ರಕರಣದಡಿ ವರ್ಗಾವಣೆ ಮಾಡಲು ನಡೆಸುವ ಕೌನ್ಸೆಲಿಂಗ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಹೊಸದಾಗಿ ನೇಮಕಗೊಂಡ ಪಿಯು ಉಪನ್ಯಾಸಕರಿಗೆ ಮೊದಲು ‘ಸಿ’ ವಲಯದಲ್ಲಿ ಸ್ಥಳ ನಿಯುಕ್ತಿ ಮಾಡಲಾಗುತ್ತದೆ. ಆದರೆ, ಈಗ ನೇಮಕಗೊಂಡಿರುವ 1,203 ಅಭ್ಯರ್ಥಿಗಳಿಗೆ ಅವಶ್ಯವಿರುವಷ್ಟು ಖಾಲಿ ಹುದ್ದೆಗಳು ‘ಸಿ’ ವಲಯದಲ್ಲಿ ಲಭ್ಯವಿಲ್ಲ. ಸದ್ಯ ‘ಸಿ’ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಜ್ಯೇಷ್ಠತಾ ಆಧಾರದಲ್ಲಿ ‘ಬಿ’ ಮತ್ತು ‘ಎ’ ವಲಯಗಳಿಗೆ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಉಪನ್ಯಾಸಕರು www.pue.kar.nic.in ಮೂಲಕ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. . ಜುಲೈ 28 ಕೊನೆಯ ದಿನ. ಆಕ್ಷೇಪಣೆಗಳನ್ನು ಇದೇ 31ರೊಳಗೆ pu.recruitment2020@gmail.comಗೆ ಇ–ಮೇಲ್ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.