ಮೈಸೂರು: ಇರಾನಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪದ ಪ್ರಕರಣದಲ್ಲಿ ಮೈಸೂರು ನ್ಯಾಯಾಲಯಕ್ಕೆ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಹಾಜರು ಪಡಿಸಿದ್ದು, ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕೌಟುಂಬಿಕ ಕಲಹ ಹಾಗೂ ಹಣ ವಂಚನೆಗೆ ಸಂಬಂಧಿಸಿ ನಟಿ ರಾಖಿ ಸಾವಂತ್ ನೀಡಿದ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಆದಿಲ್‌ನನ್ನು ಬಂಧಿಸಿದ್ದರು. ಮಂಗಳವಾರ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಈ ಮಧ್ಯೆ, ಮೈಸೂರಿನಲ್ಲಿ ಆದಿಲ್ ವಿರುದ್ಧ ಇರಾನಿ ವಿದ್ಯಾರ್ಥಿನಿ ನೀಡಿದ ಅತ್ಯಾಚಾರ ದೂರನ್ನಾಧರಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿ.ವಿ.ಪುರಂ ಪೊಲೀಸರು ಮುಂಬೈ ನ್ಯಾಯಾಲಯದಿಂದ ಆತನನ್ನು ವಶಕ್ಕೆ ಪಡೆದು, ಬುಧವಾರ ಮೈಸೂರಿಗೆ ಕರೆತಂದು ಇಲ್ಲಿನ ಪ್ರಧಾನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯ ಫೆ. 27ವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಮೈಸೂರಿನಲ್ಲಿ ರಾಖಿ: ಬುಧವಾರ ಮೈಸೂರಿಗೆ ಬಂದಿದ್ದ ರಾಖಿ ಸಾವಂತ್, ಇಬ್ಬರು ಗೆಳತಿಯರು, ಹಿತೈಷಿಗಳು ಹಾಗೂ ಅವರ ವಕೀಲರು ನ್ಯಾಯಾಲಯದಲ್ಲಿ ಆದಿಲ್ ವಿರುದ್ಧ ದೂರು ಸಲ್ಲಿಸಿ ಆತನಿಂದಾದ ₹1.60 ಕೋಟಿ ವಂಚನೆ, ದೌರ್ಜನ್ಯದ ಮಾಹಿತಿ ನೀಡಿದ್ದರು. ಆತನಿಗೆ ಜಾಮೀನು ನೀಡಬಾರದು ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.