ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ’ಯಲ್ಲಿನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜಿಬ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರನ್ನು ಹತ್ತು ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ನಗರದ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಇಬ್ಬರೂ ಆರೋಪಿಗಳನ್ನು ಗುರುವಾರ (ಏ.12) ರಾತ್ರಿ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಂಧಿಸಿದ್ದ ಎನ್ಐಎ ತನಿಖಾಧಿಕಾರಿಗಳು ಶನಿವಾರ ಬೆಳಗ್ಗೆ 11.30ಕ್ಕೆ ನಗರದ ಎನ್ಜಿವಿ ಕಾಂಪ್ಲೆಕ್ಸ್ನಲ್ಲಿರುವ ಎನ್ಐಎ ವಿಶೇಷ ಕೋರ್ಟ್ನ ಉಸ್ತುವಾರಿ ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಯಿತು.

ಎನ್ಐಎ ಪರ ಹಾಜರಾಗಿದ್ದ ವಕೀಲ ಪಿ.ಪ್ರಸನ್ನಕುಮಾರ್, ‘ಆರೋಪಿಗಳನ್ನು ಕೋಲ್ಕತ್ತಾ ಮಹಾನಗರಕ್ಕೆ ಹೊಂದಿಕೊಂಡ ಪೂರ್ವ ಮೇದಿನಿಪುರ ಜಿಲ್ಲೆಯ ಹೋಟೆಲ್ ವೊಂದರಲ್ಲಿ ಗುರುವಾರ (ಏ.11) ರಾತ್ರಿ ವೇಳೆ ಎನ್ಐಎ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಇವರ ವಿರುದ್ಧ ಗುರುತರ ಆರೋಪಗಳಿದ್ದು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ವಶಕ್ಕೆ ಒಪ್ಪಿಸಲು ಆದೇಶಿಸಬೇಕು’ ಎಂದು ಕೋರಿದರು.

‘ಜನಸಂದಣಿ ಸ್ಥಳದಲ್ಲಿ ಬಾಂಬ್ ಇರಿಸಿ ಸ್ಫೋಟಿಸಿ, ಜನರಲ್ಲಿ ಭಯವನ್ನುಂಟು ಮಾಡಲಾಗಿದೆ. ಭಯೋತ್ಪಾದನೆಯ ದೊಡ್ಡ ಸಂಚಿನ ಭಾಗ ಇದಾಗಿದೆ. ಇದರಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಸಂಚಿನ ಪ್ರತಿಯೊಂದು ಸಂಗತಿಯನ್ನೂ ಪತ್ತೆ ಮಾಡಬೇಕಿದೆ. ಇದಕ್ಕಾಗಿ ಶಂಕಿತರ ವಿಚಾರಣೆ ಅಗತ್ಯವಿದೆ’ ಎಂದು ತಿಳಿಸಿದರು.

ಸುಮಾರು ಒಂದು ಗಂಟೆ ಎನ್ಐಎ ಪರ ಪ್ರಾಸಿಕ್ಯೂಷನ್ ವಾದ ಆಲಿಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು 10 ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿ ಆದೇಶಿಸಿದರು.

‘ಆರೋಪಿಗಳ ಬಂಧನದ ಬಗ್ಗೆ ಅವರ ಕುಟುಂಬ ವರ್ಗದವರಿಗೆ ಶುಕ್ರವಾರವೇ ಮಾಹಿತಿ ನೀಡಲಾಗಿತ್ತು. ಇಂದು ಅವರ ಪರವಾಗಿ ಕುಟುಂಬದ ಯಾವುದೇ ಸದ್ಯರಾಗಲೀ ಅಥವಾ ಅವರನ್ನು ಪ್ರತಿನಿಧಿಸುವ ವಕೀಲರಾಗಲೀ ವಿಚಾರಣೆ ವೇಳೆ ಹಾಜರಾಗಿರಲಿಲ್ಲ’ ಎಂದು ಪ್ರಸನ್ನ ಕುಮಾರ್ ಪ್ರಜಾವಾಣಿಗೆ ತಿಳಿಸಿದರು.
.ರಾಮೇಶ್ವರಂ ಕೆಫೆ ಸ್ಫೋಟ | ಹಿಂದೂ ಹೆಸರು, ಕಲಬುರಗಿ ವಿಳಾಸ ನೀಡಿದ್ದ ಶಂಕಿತರು.ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳ ರಕ್ಷಣೆಗೆ ಕಾಂಗ್ರೆಸ್ ಯತ್ನಿಸಿತ್ತು: ಆರ್.ಅಶೋಕ.ರಾಮೇಶ್ವರಂ ಕೆಫೆ ಸ್ಫೋಟ: ಬಾಂಬ್ ಇಟ್ಟಿದ್ದ ಮುಸಾವೀರ್, ಅಬ್ದುಲ್ ಮಥೀನ್ ವಶಕ್ಕೆ.ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಹೆಗಡೆನಗರದಲ್ಲಿ ವಾಸ, ಜಕ್ಕೂರಿನಲ್ಲಿ ಕೆಲಸ.ರಾಮೇಶ್ವರಂ ಕೆಫೆ ಸ್ಫೋಟ | ಆರೋಪಿಗಳ ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ–NIA.ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬೆಂಗಳೂರು, ತೀರ್ಥಹಳ್ಳಿಯಲ್ಲಿ ಎನ್ಐಎ ದಾಳಿ.ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಇಬ್ಬರು ವಶಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.