ಮೈಸೂರು: ಪ್ರಸಕ್ತ ಸಾಲಿನ ‘ರಂಗ ಗೌರವ ಪುರಸ್ಕಾರ’ಕ್ಕೆ ರಂಗಕರ್ಮಿ ಎ.ನಾರಾಯಣ ರೈ ಆಯ್ಕೆಯಾಗಿದ್ದು, ರಂಗಾಯಣದ ‘ನವರಾತ್ರಿ ರಂಗೋತ್ಸವ’ ಉದ್ಘಾಟನೆ ದಿನವಾದ ಅ.15ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಪ್ರದಾನ ಮಾಡಲಿದ್ದಾರೆ.

ಭೂತಕೋಲ, ಯಕ್ಷಗಾನ, ಬಯಲಾಟದ ಜೊತೆ ರಂಗಭೂಮಿಗೆ ಸಲ್ಲಿಸಿದ ಕೊಡುಗೆ ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು ₹ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ ಎಂದು ರಂಗಾಯಣದ ಪ್ರಕಟಣೆ ತಿಳಿಸಿದೆ.

ಕಾಸರಗೋಡಿನ ಏವುಂಜೆ ಗ್ರಾಮದವರಾದ ಅವರು ಹುಣಸೂರಿನ ತಂಬಾಕು ಸಂಶೋಧನಾ ಮಂಡಳಿಯಲ್ಲಿ ನೌಕರರಾಗಿದ್ದುಕೊಂಡೇ ರಂಗಭೂಮಿಯನ್ನು ಕಟ್ಟಿದರು. ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಆಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 8 ಎಕರೆ ಜಮೀನನ್ನು ಖರೀದಿಸಲು ನೆರವಾದರು ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.