ಬೆಂಗಳೂರು: ಕೋವಿಡ್-19ರ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಜೆ.ಸಿ ನಗರದಲ್ಲಿ ಬಡವರಿಗೆ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿದರು.

ಅಕ್ಕಿ, ಬೇಳೆ, ಎಣ್ಣೆ ಮತ್ತು ಸಾಂಬಾರು ಪದಾರ್ಥಗಳನ್ನು ಒಳಗೊಂಡ 19 ಕೆ.ಜಿ ತೂಕದ 500 ಕಿಟ್‌ಗಳನ್ನು ವಿತರಿಸಲಾಯಿತು.
‘ಬುಧವಾರ ಮತ್ತು ಗುರುವಾರವೂ ನಗರದ ವಿವಿಧೆಡೆ ಕೊಳಗೇರಿ ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥ ವಿತರಣೆ ಮಾಡಲಾಗುವುದು’ ಎಂದು ದೀಕ್ಷಿತ್ ಅವರು ತಿಳಿಸಿದರು.

ವಿತರಣೆ ವೇಳೆ ಕೃಷ್ಣ ದೀಕ್ಷಿತ್ ಅವರ ಪತ್ನಿ ಯೋಗಿನಿ ದೀಕ್ಷಿತ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅವರ ಪತ್ನಿ ನಾಝಿಹಾ ರಿಜ್ವಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.