ಚಿಕ್ಕಮಗಳೂರು: ‘ಧರ್ಮದಿಂದ ವಿಶ್ವಶಾಂತಿ ಕಾಪಾಡಲು ಸಾಧ್ಯ. ‘ಎಲ್ಲರೂ ನಮ್ಮವರು’ ಎಂಬ ಬಸವಣ್ಣನವರ ಸಂದೇಶವನ್ನು ಪಾಲಿಸಬೇಕು. ಸಮಾನ ಅವಕಾಶಗಳ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ವೀರಭದ್ರಸ್ವಾಮಿ ರಥೋತ್ಸವ, ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ, ಶಿವಾದ್ವೈತ ಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬಿ.ಎಸ್. ಯಡಿಯೂರಪ್ಪ ಅವರ ಹೋರಾಟಕ್ಕೆ ಸಲ್ಲಬೇಕಾದಷ್ಟು ನ್ಯಾಯ ಅವರಿಗೆ ಸಿಕ್ಕಿಲ್ಲ. ಅವರನ್ನು ಹಿಂದಕ್ಕೆ ತಳ್ಳುವ ಷಡ್ಯಂತ್ರಗಳು ನಿರಂತರವಾಗಿ ನಡೆದವು. ಷಡ್ಯಂತ್ರಗಳಿಗೆ ಜಗ್ಗದೆ ಬಗ್ಗದೆ ಬೆಳೆದರು. ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.