ಬೆಂಗಳೂರು: ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಷನ್ ಕೊಡಮಾಡುವ ‘ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ –2022’ಕ್ಕೆ 11 ಮಂದಿ ಸಾಧಕರು ಆಯ್ಕೆ ಆಗಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ (ಬೆಂಗಳೂರು), ಸಾಮಾಜಿಕ ಕಳಕಳಿ ವಿಭಾಗದಲ್ಲಿ ಟಿ.ವಿ–9ರ ರಂಗನಾಥ್ ಭಾರದ್ವಾಜ್ (ಬೆಂಗಳೂರು), ಪರಿಸರ ಸಂರಕ್ಷಣೆ ವಿಭಾಗದಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ ಸಂಸ್ಥಾಪಕರೂ ಆಗಿರುವ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ (ತೆಲಂಗಾಣ), ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ
ಕಳಕಳಿ ವಿಭಾಗದಲ್ಲಿ ಪರಿಸರ ಸಂರಕ್ಷಕ ಸತ್ಯ ಮಾರ್ಗನಿ (ಕಡಿಯಂ, ಆಂಧ್ರಪ್ರದೇಶ), ಶಿಕ್ಷಣ ಸಾಮಾಜಿಕ ಕಳಕಳಿ ವಿಭಾಗದಲ್ಲಿ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ (ಬೆಂಗಳೂರು), ವೈದ್ಯಕೀಯ ಕ್ಷೇತ್ರದಿಂದ ಚಿಕಿತ್ಸೆಗೆ ₹ 10 ಪಡೆಯುವ ಡಾ.ಚಂದ್ರಮೌಳಿ (ಹಾಸನ ಜಿಲ್ಲೆ, ಬೇಲೂರು), ಸಾಮಾಜಿಕ ಕಳಕಳಿ ವಿಭಾಗದಲ್ಲಿ ಆಸ್ಟ್ರೇಲಿಯ ಕನ್ನಡ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸತೀಶ್ ಭದ್ರಣ್ಣ (ಆಸ್ಪ್ರೇಲಿಯ), ಸಮಾಜ ಸೇವಾ ಕ್ಷೇತ್ರ ಡಾ.ಗೋವಿಂದ ಬಾನು ಪೂಜಾರಿ (ಬೈಂದೂರು, ಬಿಜೂರು), ಸಾರ್ವಜನಿಕ ಸೇವಾ ಕ್ಷೇತ್ರ ಪೊಲೀಸ್ ಇಲಾಖೆಯ ಕೆ.ಶಿವಕುಮಾರ್ (ಚಿಕ್ಕಬಳ್ಳಾಪುರ), ಸಮಾಜ ಸೇವಾ ಕ್ಷೇತ್ರ ಅಮರ್ ನಾಗೇಶ್ ರಾವ್ (ಬೆಂಗಳೂರು) ಹಾಗೂ ವಿಶೇಷ ಪ್ರಶಸ್ತಿ ಪುರಸ್ಕೃತರಾಗಿ ಸಂಗೀತ ಕ್ಷೇತ್ರದಿಂದ ಬೆಂಗಳೂರಿನ ಬಾಲಪ್ರತಿಭೆ ಜ್ಞಾನ ಗುರುರಾಜ್ ಆಯ್ಕೆಯಾಗಿದ್ದಾರೆ.

ಶಾಸಕ ಡಾ.ಜಿ.ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿಯು ಈ ಸಾಧಕರನ್ನು ಆಯ್ಕೆ ಮಾಡಿದೆ.

ಇಲ್ಲಿನ ವಸಂತನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜೂನ್ 30ರಂದು ನಡೆಯುವ ತಿಮ್ಮಕ್ಕ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು ಎಂದು ಪರಮೇಶ್ವರ ತಿಳಿಸಿದ್ದಾರೆ.

ಪುರಸ್ಕೃತರಿಗೆ ತಲಾ ₹ 25 ಸಾವಿರ ನಗದು, ಬೆಳ್ಳಿ ಪದಕ, ಪ್ರಶಸ್ತಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.