ಹೊಳಲ್ಕೆರೆ: ‘ನಮಗೆ ವೀರಶೈವ ಪದ ಸರಿ ಹೊಂದುವುದಿಲ್ಲ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಧು ವೀರಶೈವ ಸಂಘ ಹಾಗೂ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಶರಣರ ಸಮ್ಮೇಳನದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಆಹ್ವಾನ ಪತ್ರಿಕೆ ಹಾಗೂ ಫ್ಲೆಕ್ಸ್‌ನಲ್ಲಿ ‘ಸಾಧು ವೀರಶೈವ ಸಂಘ’ ಎಂಬ ಪದ ಗಮನಿಸಿದ ಸಾಣೇಹಳ್ಳಿ ಶ್ರೀಗಳು, ‘ನಾವು ಲಿಂಗಾಯತರು. ಬಸವ ಪರಂಪರೆಯಿಂದ ಬಂದವರು. ನಾವು ದೇವರನ್ನು ಪೂಜಿಸಲು ಗುಡಿಗೆ ಹೋಗುವುದಿಲ್ಲ. ನಮ್ಮ ದೇಹವೇ ಒಂದು ದೇಗುಲ ಇದ್ದಂತೆ. ನಮ್ಮ ಸಮಾಜಬಂಧುಗಳೆಲ್ಲರೂ ಲಿಂಗದೀಕ್ಷೆ ಪಡೆದುಕೊಳ್ಳಬೇಕು. ಇನ್ನು ಮುಂದೆ ಸಭೆ, ಸಮಾರಂಭಗಳಲ್ಲಿ ‘ವೀರಶೈವ’ ಎಂಬುದರ ಬದಲಿಗೆ ‘ಲಿಂಗಾಯತ’ ಎಂಬ ಪದ ಬಳಸಿ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.