ಬೆಂಗಳೂರು: ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘವು 2024ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಪತ್ರಕರ್ತ ಜಿ.ಎನ್. ಮೋಹನ್ಗೆ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ’, ಪತ್ರಕರ್ತ ಬಿ.ಎಂ. ಹನೀಫ್ಗೆ ‘ಬಿ ರಾಚಯ್ಯ ದತ್ತಿ ಪ್ರಶಸ್ತಿ’, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ಗೆ ‘ಪ್ರೊ. ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ’, ಪತ್ರಕರ್ತೆ ಮಂಜುಳಾ ಹುಲಿಕುಂಟೆಗೆ ‘ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ’ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳು ಫಲಕ ಹಾಗೂ ತಲಾ ₹10 ಸಾವಿರ ನಗದನ್ನು ಒಳಗೊಂಡಿವೆ.

‘ಶಿವಮೊಗ್ಗ ಮಲ್ನಾಡ್ವಾಣಿ’ ಪತ್ರಿಕೆ ಸಂಪಾದಕ ಕೆ. ಏಕಾಂತಪ್ಪ, ತುಮಕೂರಿನ ‘ವಿಶಾಲವಾರ್ತೆ’ ಪತ್ರಿಕೆ ಸಂಪಾದಕ ಸೊಗಡು ವೆಂಕಟೇಶ್, ಮಂಡ್ಯದ ‘ಜನೋದಯ’ ಪತ್ರಿಕೆ ಸಂಪಾದಕಿ ಮಂಜುಳಾ ಕಿರುಗಾವಲು, ಕಲಬುರಗಿಯ ‘ಹೈದ್ರಾಬಾದ್ ಕರ್ನಾಟಕ ಮುಂಜಾವು’ ಪತ್ರಿಕೆ ಸಂಪಾದಕ ಸುರೇಶ್ ಸಿಂಧ್ಯೆ ಅವರಿಗೆ ಸಂಘದ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಇವು ತಲಾ ₹5 ಸಾವಿರ ನಗದನ್ನು ಒಳಗೊಂಡಿವೆ ಎಂದು ಸಂಘದ ಅಧ್ಯಕ್ಷ ಚೆಲುವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಗಾಂಧಿಭವನದಲ್ಲಿ ಇದೇ 29ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.