ಬೆಳಗಾವಿ: ಸರ್ಕಾರಿ ಕಚೇರಿಗಳ ಮುಂದೆ 10 ವರ್ಷಕ್ಕೂ ಹೆಚ್ಚು ಅವಧಿಯಿಂದ ನಿಂತಿರುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಅವುಗಳನ್ನು ವಿಲೇವಾರಿ ಮಾಡಿ ಅಥವಾ ಗುಜರಿಗೆ ಹಾಕಿ ಎಂದು ಬಿಜೆಪಿಯ ಹರ್ಷವರ್ಧನ್ ಅವರು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ‘3 –4 ಲಕ್ಷ ಕಿ.ಮೀ ಓಡಿದ ವಾಹನಗಳನ್ನೂ ರಿಪೇರಿ ಮಾಡಿ ಓಡಿಸುತ್ತಿದಾರೆ. ಇವುಗಳಿಂದ ಅಪಘಾತವೂ ಆಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸರ್ಕಾರಿ ಕಚೇರಿಗಳು, ಶಾಸಕರ ಭವನ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರಿ ವಾಹನಗಳು ನಿಂತಿವೆ. ಇವು ತುಕ್ಕು ಹಿಡಿದಿವೆ. ಇದಕ್ಕೆ ಮುಕ್ತಿ ಕಾಣಿಸಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ‘ಸ್ಕ್ರ್ಯಾಪ್‌ಗೆ ಹಾಕಲು ವ್ಯವಸ್ಥೆ ಮಾಡಲಾಗವುದು. ಆದರೆ, ಪೊಲೀಸ್ ಠಾಣೆ ಬಳಿ ಇರುವ ವಾಹನಗಳನ್ನು ಹರಾಜು ಹಾಕಲು ಸಾಧ್ಯವಿಲ್ಲ. ಇದಕ್ಕೆ ನ್ಯಾಯಾಲಯದ ಒಪ್ಪಿಗೆ ಬೇಕು. ನಿಂತಲ್ಲೇ ಕೆಲವರು ಬಿಡಿ ಭಾಗಗಳನ್ನು ಬಿಚ್ಚಿಕೊಂಡು ಹೋಗುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.