ಉಜಿರೆ: ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರ ಸರ್ವಧರ್ಮ ಪ್ರಾರ್ಥನೆಯು ಇಡೀ ಸಭೆಗೆ ಹೊಸದಿಕ್ಕನ್ನೇ ನೀಡಿದಂತಾಯಿತು.

‘ಶಂಕರಾಭರಣ ರಾಗ’ದಲ್ಲಿ ಸರ್ವಧರ್ಮ ಸಂಗೀತ ಪ್ರಸ್ತುತಪಡಿಸಿ ಸಮ್ಮೇಳನದ ಆಶಯವನ್ನು ಅರ್ಥಪೂರ್ಣಗೊಳಿಸಿದರು.

ಬರೋಬ್ಬರಿ ಎರಡು ಗಂಟೆಗಳ ಕಾಲ ನಡೆದ ಸಂಗೀತ ಕಛೇರಿಯನ್ನು ಶ್ರೋತೃಗಳು ಆನಂದಿಸಿದರು. ಓಂ ತತ್ ಸತ್ ಶ್ರೀ ನಾರಾಯಣ ತು, ಪುರುಷೋತ್ತಮ ಗುರು ತು, ಸಿದ್ಧ ಬುದ್ಧ ತು, ಸ್ಕಂದ ವಿನಾಯಕ, ಸವಿತಾ ಪಾವಕ ತು... ಎಂಬ ಹಾಡನ್ನು ಹಾಡುತ್ತ ಒಂದು ಕ್ಷಣ ಅವರು ಗದ್ಗದಿರಾಗುತ್ತಿದ್ದಂತೆಯೇ ಸಭಾಂಗಣದಲ್ಲಿ ಮೌನ ನೆಲೆಸಿತ್ತು. ಮತ್ತೆ ಸಂಗೀತ ಧಾರೆಯನ್ನು ಮುಂದುವರಿಸುತ್ತ, ವಚನಗಳನ್ನು ಹಾಡಿ ಕೂಡಲಸಂಗಮನನ್ನು ನೆನೆದರು. ಜಗದೋದ್ಧಾರನಾ... ಎಂಬ ಕೃಷ್ಣನ ಹಾಡಿನ ಬೆನ್ನಿಗೇ ಸೂಫಿ ಸಂತರ ಹಾಡೊಂದನ್ನು ಕೈಗೆತ್ತಿಕೊಂಡರು.

ಬಾಹುಬಲಿಯ ಆದರ್ಶ ಸಾರುವ ಹಾಡು, ಗಾಂಧೀಜಿಯವರ ಪ್ರಸಿದ್ಧ ಪ್ರಾರ್ಥನೆ ‘ರಘುಪತಿ ರಾಘವ ರಾಜಾರಾಮ್’ ಹಾಡುಗಳು ಒಂದರ ಹಿಂದೊಂದು ಅಲೆಅಲೆಯಾಗಿ ಮೂಡಿಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.