ರಾಜ್ಯದಲ್ಲಿ ಹಾವು ಕಚ್ಚಿದ ಹೆಚ್ಚಿನ ಪ್ರಕರಣಗಳು ಈ ಹಿಂದೆ ಗಮನಕ್ಕೆ ಬರುತ್ತಿರಲಿಲ್ಲ. ಘೋಷಿತ ಕಾಯಿಲೆಯೆಂದು ಗುರುತಿಸಿದ ಬಳಿಕ ಎಲ್ಲ ಪ್ರಕರಣಗಳ ಮಾಹಿತಿ ದೊರೆಯುತ್ತಿದೆ
ಡಾ. ಅನ್ಸರ್ ಅಹಮದ್ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಯೋಜನೆ (ಐಡಿಎಸ್‌ಪಿ) ನಿರ್ದೇಶಕ
ನಿರ್ವಹಣೆ ಬಗ್ಗೆ ತರಬೇತಿ
ಹಾವು ಕಡಿತ ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆಯು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿ ನೀಡುತ್ತಿದೆ. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಹಾವು ಕಚ್ಚಿದಾಗ ಜನರು ನಾಟಿ ವೈದ್ಯರ ಬಳಿಗೆ ಹೋಗುವುದರಿಂದ ಅವರಿಗೂ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ? ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಲು ಇಲಾಖೆ ಮುಂದಾಗಿದೆ.