ದಶಕ ಕಳೆದರೂ ದೊರೆತಿಲ್ಲ ಪ್ಯಾಕೇಜ್!
ಶರಣಾಗತರಾದ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿತ್ತು. ನಕ್ಸಲ್ ಚಳವಳಿಯಲ್ಲಿದ್ದ ರಾಜ್ಯದವರು, ಹೊರ ರಾಜ್ಯದವರ ಅವರ ಚಟುವಟಿಕೆ, ಮೊಕದ್ದಮೆಗಳ ಆಧಾರದಲ್ಲಿ ಮೂರು ವರ್ಗಗಳಾಗಿ ವಿಂಗಡಿಸಿ, ₹2 ಲಕ್ಷದಿಂದ ₹5 ಲಕ್ಷದವರೆಗೆ ನಗದು, ಕೃಷಿ ಮಾಡಲು ಬಯಸುವವರಿಗೆ ತಲಾ ಎರಡು ಎಕರೆ ಜಮೀನು, ವಿವಿಧ ವೃತ್ತಿಪರ ತರಬೇತಿ ಪಡೆಯಲು ಬಯಸುವವರಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳು ತಲಾ ₹5,000 ನೆರವು ನಿಗದಿ ಮಾಡಿತ್ತು. ಅಂದು ಮೊದಲ ಕಂತು ನೀಡಿದ್ದ ಸರ್ಕಾರ ಉಳಿದದ್ದನ್ನು ಈವರೆಗೆ ಪಾವತಿಸಿಲ್ಲ. ಕೆಲವರಿಗೆ ಜಮೀನು ಮಂಜೂರಾದರೂ ಅರಣ್ಯ ಕಾಯ್ದೆ, ಭೂ ಮಂಜೂರಾತಿ ಮತ್ತಿತರ ಕಾರಣಗಳಿಂದ ಭೂ ಒಡೆತನವೂ ಸಿಕ್ಕಿಲ್ಲ.