ಕಾರವಾರ: ಕರಾವಳಿಯಲ್ಲಿ ಬೀಸುತ್ತಿರುವ 'ನಿಸರ್ಗ' ಚಂಡಮಾರುತವು ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಿಗೆ ಜೂನ್ 3ರಂದು ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 2 ಮತ್ತು 3ರಂದು ಕೊಂಕಣ ರೈಲು ಮಾರ್ಗದ ಕೆಲವು ವಿಶೇಷ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಜೂನ್ 2ರಂದು ಸಂಚರಿಸುವ ಎರ್ನಾಕುಲಂ- ಎಚ್.ನಿಜಾಮುದ್ದೀನ್ (ರೈಲು ಸಂಖ್ಯೆ 02617) ಸ್ಪೆಷಲ್ ರೈಲನ್ನು ಮಡಗಾಂ ಜಂಕ್ಷನ್ ನಿಂದ- ಲೋಂಡಾ- ಮೀರಜ್-ಪುಣೆ-ಮನ್ಮಾದ್ ಮಾರ್ಗವಾಗಿ ಚಲಿಸಲು ಸೂಚಿಸಲಾಗಿದೆ.

ಇದೇ ದಿನ ಸಂಚರಿಸುವ ತಿರುವನಂತಪುರ ಸೆಂಟ್ರಲ್ - ಲೋಕಮಾನ್ಯ ತಿಲಕ್ ಟರ್ಮಿನಸ್ (ರೈಲು ಸಂಖ್ಯೆ 06346) ರೈಲು ಮಡಗಾಂವ್ ಜಂಕ್ಷನ್- ಲೋಂಡಾ- ಮೀರಜ್- ಪುಣೆ- ಕಲ್ಯಾಣ ಮೂಲಕ ಸಾಗಲಿದೆ. ಅದೇರೀತಿ, 02432 ಸಂಖ್ಯೆಯ ನವದೆಹಲಿ- ತಿರುವನಂತಪುರ ಸೆಂಟ್ರಲ್ ವಿಶೇಷ ರೈಲು ಸೂರತ್- ವಸೈ ರೋಡ್- ಕಲ್ಯಾಣ್- ಮೀರಜ್- ಲೋಂಡಾ- ಮಡಗಾಂವ್ ಜಂಕ್ಷನ್ ಮೂಲಕ ಸಾಗಲಿದೆ.

ಜೂನ್ 3ರಂದು ಸಂಚರಿಸುವ ಲೋಕಮಾನ್ಯ ತಿಲಕ್ (ಟಿ)- ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 06345) ವಿಶೇಷ ರೈಲು ಸಂಜೆ 6ಕ್ಕೆ ಪ್ರಯಾಣ ಆರಂಭಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.