ಬೆಂಗಳೂರು: ‘ಸರ್ಕಾರಕ್ಕೆ ಸಾಲ: ಜನರಿಗೆ ತೆರಿಗೆ ಶೂಲ’ ವಿಶೇಷ ವರದಿಗೆ ಓದುಗರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಹುಟ್ಟು ಹಾಕಿದೆ.

ವಿಶೇಷ ವರದಿಯನ್ನು ಟ್ಯಾಗ್ ಮಾಡಿ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡ ನೂರಾರು ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ.

‘ನಮ್ಮಲ್ಲಿ ಕಾರ್ಪೊರೇಟ್ ತೆರಿಗೆ ಇತರ ದೇಶಗಳಿಗಿಂತ ಕಡಿಮೆ. ಕಡಿಮೆ ಆದಾಯದವರಿಗೆ, ತೆರಿಗೆ ಹೆಚ್ಚು. ತೆರಿಗೆ ಮನ್ನಾ ಇದರಲ್ಲಿ ಸೇರಿಲ್ಲ. ಆದರೂ ತೆರಿಗೆ ಹಣ ವ್ಯರ್ಥ ಆಗುತ್ತಿದೆ ಎಂದು ಕಾರ್ಪೊರೇಟ್ ಧಣಿಗಳು ಹುಯಿಲೆಬ್ಬಿಸುತ್ತಿದ್ದಾರೆ. ಅದನ್ನು ಹಲವರು ಎಲ್ಲರಿಗೂ ಕಳಿಸಿಕೊಟ್ಟು ತಮ್ಮಿಂದಾದಷ್ಟು ‘ದೇಶ ಸೇವೆ’ ಮಾಡುತ್ತಿದ್ದಾರೆ ’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕಾರ್ಪೊರೇಟ್‌ಗಳಿಗೆ ಜಗತ್ತಿನಲ್ಲೇ ಅತಿ ಕಡಿಮೆ ತೆರಿಗೆ ಇರುವ ರಾಷ್ಟ್ರಗಳಲ್ಲಿ ನಮ್ಮದೂ ಒಂದು. ಇಷ್ಟಾದ ಮೇಲೂ ನಾವು ತೆರಿಗೆ ಕಟ್ಟೋರು. ಮಿಕ್ಕವರು ಕುಂತು ತಿನ್ನೋರು ಎಂದು ಬಾಯಿ ಬಡಿದುಕೊಳ್ಳುವ ಮೇಲ್ಮಧ್ಯಮ ವರ್ಗದ ತುಂಡುಗಳು ಮತ್ತು ‘ಪರಿವಾರಿ’ಗಳಿಂದ ಪ್ರಚಾರ ನಡೆದಿದೆ. ಇದಕ್ಕೆ ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರು ಮುನ್ನುಡಿ ಬರೆದರು. ಬಿಜೆಪಿ ಸರ್ಕಾರ ದೇಶದ ಜನಸಾಮಾನ್ಯರನ್ನು ಹಿಂಡಿ ಕಾರ್ಪೊರೇಟ್‌ಗಳಿಗೆ, ಅತಿ ಶ್ರೀಮಂತರಿಗೆ ಮಣೆ ಹಾಕುವುದರಲ್ಲಿ ಮಿಕ್ಕವರನ್ನು ಮೀರಿಸಿದೆ. ಒಂದು ರಾಷ್ಟ್ರ– ಒಂದು ತೆರಿಗೆಯಲ್ಲ; ಒಂದು ರಾಷ್ಟ್ರ ಜನಸಾಮಾನ್ಯರಿಗೆ ತೆರಿಗೆ, ಶ್ರೀಮಂತರಿಗೆ ವಿನಾಯಿತಿ ಎನ್ನಬಹುದು. ಅಂಕಿ–ಅಂಶ, ಪುರಾವೆಗಳನ್ನು ಬಿಟ್ಟು ಫೇಕ್ ಫಾರ್ವರ್ಡ್ ಮಾಡಿಕೊಂಡು ದೇಶ ದ್ರೋಹ ಎಸಗುತ್ತಿರುವ ನಾವು ಟ್ಯಾಕ್ಸ್‌ಪೇಯರ್ಸ್ ಮನಸ್ಥಿತಿಯವರಿಗೆ ಅರ್ಥವಾದೀತೆ’ ಎಂದುಡಾ. ವಾಸು ಎಚ್.ವಿ ಪ್ರಶ್ನಿಸಿದ್ದಾರೆ.

‘ಉದಾರೀಕರಣವೂ, ಹಣವಂತರ ಪರವಾದ ನಿರ್ದಯೀ ಸುಲಿಗೆಕೋರರ ಸರ್ಕಾರವೂ, ಸಾಮಾನ್ಯರ ಅಸಹಾಯಕ ಕಥೆಯೂ, ಸರ್ಕಾರದ ಭಾವನಾತ್ಮಕ ಕಣ್ಕಟ್ಟುಗಳು ಉಳ್ಳವರ ಅಮಾನವೀಯ ಹಾಗೂ ಉಡಾಫೆಯೂ’ ಎಂದು ಸಂಜೋತಿ ವಿ.ಕೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.