ಬೆಂಗಳೂರು:ಪಠ್ಯ ಪುಸ್ತಕದಲ್ಲಿ ಕವಿತೆ ಹಾಗೂ ಲಲಿತಪ್ರಬಂಧವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಮೂಡ್ನಾಕೂಡು ಚಿನ್ನಾಸ್ವಾಮಿ ಹಾಗೂ ಈರಣ್ಣ ಕಂಬಳಿ ಅವರೂ ವಾಪಸ್ ಪಡೆದಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಈ ಹಿಂದೆ ಜಿ.ರಾಮಕೃಷ್ಣ,ಸಿದ್ದರಾಮಯ್ಯ ಹಾಗೂ ದೇವನೂರ ಮಹದೇವ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ಈ ಸಾಲಿಗೆಮೂಡ್ನಾಕೂಡು ಚಿನ್ನಾಸ್ವಾಮಿ,ಈರಣ್ಣ ಕಂಬಳಿ ಸೇರಿದ್ದಾರೆ.

ಮೂಡ್ನಾಕೂಡು ಚಿನ್ನಾಸ್ವಾಮಿ, ಈರಣ್ಣ ಕಂಬಳಿಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದು ಈ ವಿಷಯ ತಿಳಿಸಿದ್ದಾರೆ.

5ನೇ ತರಗತಿಗೆ ಪಠ್ಯವಾಗಿರುವ‘ನನ್ನ ಕವಿತೆಗೆ‘ ಎಂಬ ಕವನವನ್ನುಮೂಡ್ನಾಕೂಡು ಚಿನ್ನಾಸ್ವಾಮಿ ಹಿಂಪಡೆದಿದ್ದಾರೆ.ಈರಣ್ಣ ಕಂಬಳಿ ಅವರು 10ನೇ ತರಗತಿಗೆ ಪಠ್ಯವಾಗಿರುವ ‘ಹೀಗೊಂದು ಟಾಪ್ ಪ್ರಯಾಣ‘ ಲಲಿತಪ್ರಬಂಧವನ್ನು ಮುಂದುವರೆಸಬಾರದೆಂದು ಅವರು ಹೇಳಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿರುವ ಅವರು ‘ಪಠ್ಯ ಬೋದಿಸಲು ನೀಡಿದ್ದಅನುಮತಿಯನ್ನು ಹಿಂಪಡೆದಿದ್ದೇವೆ‘ ಎಂದು ಹೇಳಿದ್ದಾರೆ.

ಮೂಡ್ನಾಕೂಡು ಚಿನ್ನಾಸ್ವಾಮಿ ಅವರ ಪತ್ರ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.