ಬೆಂಗಳೂರು: ತಮಗೆ ಬೇಕಾದವರಿಗೆಲ್ಲ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡುತ್ತಾ ರಾಜ್ಯ ಸರ್ಕಾರ ಮೋಜು–ಮಸ್ತಿ ಮಾಡುತ್ತಿದೆ. ರೈತರಿಗೆ ಬರಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಸ್ಥಿತಿ ಭೀಕರವಾಗಿದೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಇದೆ. ಇಂತಹ ಸಮಯದಲ್ಲಿ ರೈತರಿಗೆ ₹2 ಸಾವಿರ ನೀಡಿ ಸುಮ್ಮನಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೃಷಿ ಸಮ್ಮಾನ ಯೋಜನೆ ಅಡಿ ಕೇಂದ್ರದ ₹6 ಸಾವಿರ ಜತೆಗೆ, ರಾಜ್ಯ ಸರ್ಕಾರವೂ ₹4 ಸಾವಿರ ನೀಡುತ್ತಿತ್ತು. ಅದನ್ನೂ ಸ್ಥಗಿತ ಮಾಡಲಾಗಿದೆ ಎಂದರು.

74 ಮಂದಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗಿದೆ. ಇಷ್ಟು ದೊಡ್ಡಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ನೀಡುವ ಅಗತ್ಯ ಇಲ್ಲ. ಒಬ್ಬರಿಗೆ ತಿಂಗಳಿಗೆ ಕನಿಷ್ಠ ₹5 ಲಕ್ಷ ಖರ್ಚಾಗುತ್ತದೆ. 34 ಹೊಸ ಕಾರುಗಳನ್ನು ಖರೀದಿಸಲಾಗಿದೆ. ಸಿದ್ದರಾಮಯ್ಯ ಮನೆ ನವೀಕರಣಕ್ಕೆ ₹6.40 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

ಮೋಜು ಮಾಡುತ್ತಿರುವ ಸರ್ಕಾರ ರಾಜ್ಯದ ದೇವಸ್ಥಾನಗಳ ಆದಾಯದಲ್ಲೂ ಶೇ 10ರಷ್ಟು ಪಾಲು ಕೇಳುತ್ತಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಪರಿಹಾರ ನೀಡಲು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿದೆ. ಕುಡಿಯುವ ನೀರು ಪೂರೈಸಲು ಆಗದ ಸ್ಥಿತಿ ತಲುಪಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.