ಬೆಳಗಾವಿ/ ಹಾವೇರಿ: ‘ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ಮಹತ್ವದ ಚರ್ಚೆ ನವದೆಹಲಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿತ್ತು’ ಎಂದು ಅಂಗಡಿ ಅವರ ಸೋದರ ಮಾವ, ರೈತ ಮುಖಂಡ ಲಿಂಗರಾಜ ಪಾಟೀಲ ಮಂಗಳವಾರ ಬೆಳಗಾವಿಯಲ್ಲಿ ಹೇಳಿದರು.

ಆದರೆ, ಇಂಥ ಚರ್ಚೆಗಳು ಎಲ್ಲಿಯೂ ನಡೆದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ಹಾವೇರಿಯಲ್ಲಿ ಹೇಳಿದ್ದಾರೆ.

ಅಂಗಡಿ ಅವರ ಗೃಹ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪಾಟೀಲ ಅವರು, ‘ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸುರೇಶ ಅವರ ಹೆಸರು ಮುಂಚೂಣಿಯಲ್ಲಿತ್ತು. ಈ ವಿಷಯವನ್ನು ಅನೇಕ ಸಂಸದರು ಪ್ರಸ್ತಾಪಿಸಿದ್ದರು; ಬೆಂಬಲಿಸಿದ್ದರು. ದೆಹಲಿಯ ಮನೆಯಲ್ಲಿ ಹಲವು ಸಭೆಗಳು ನಡೆದಿದ್ದವು. ನಾನೂ ಭಾಗಿಯಾಗಿದ್ದೆ. ಒಳ್ಳೆಯ ವ್ಯಕ್ತಿ. ಅಜಾತಶತ್ರು. ಹೆಸರು ಕೆಡಿಸಿಕೊಂಡಿಲ್ಲ. ಸಮಾಜದ ನಾಯಕ ಹಾಗೂ ಎಲ್ಲರಿಗೂ ಬೇಕಾದವರಾಗಿದ್ದಾರೆ. ಈ ಕಾರಣದಿಂದ ಪರಿಗಣಿಸಬೇಕು ಎಂಬ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ದೈವ ಈ ರೀತಿ ಮಾಡಿತು’ ಎಂದು ತಿಳಿಸಿದರು.

ಎಲ್ಲಿಯೂ ಚರ್ಚೆಯಾಗಿಲ್ಲ:‘ಸಿ.ಎಂ ಬದಲಾವಣೆ ಇಲ್ಲವೇ ಇಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆಗಳು ನಡೆದಿಲ್ಲ. ಸುರೇಶ್ ಅಂಗಡಿ ನನಗೆ ಬಹಳ ಆತ್ಮೀಯರು. ಅವರು ಎಂದೂ ಮುಖ್ಯಮಂತ್ರಿ ವಿಚಾರದ ಬಗ್ಗೆ ಚರ್ಚಿಸಿರಲಿಲ್ಲ. ಮುಂದಿನ ಮೂರು ವರ್ಷ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು’ ಎಂದು ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.