ಬೆಂಗಳೂರು: ತಮಿಳುನಾಡಿನ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ ಅವರು ಸತೀಶ್ ಕುಮಾರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ನಗರದ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಯಕಲ್ಯಾಣಿ ಅವರು ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದರು. ಆತಂಕಗೊಂಡಿದ್ದ ತಂದೆ, ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದರು. ಮಗಳನ್ನು ಯಾರೋ ಅಪಹರಿಸಿದ್ದಾರೆಂದು ಆರೋಪಿಸಿದ್ದರು ಇದರ ಬೆನ್ನಲ್ಲೆ ಮನೆಯವರ ವಿರೋಧದ ನಡುವೆ ರಾಯಚೂರಿನ ಹಾಲಸ್ವಾಮಿ ಮಠದಲ್ಲಿ ಜಯಕಲ್ಯಾಣಿ ಅವರು ಪ್ರಿಯಕರ ಸತೀಶ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

ಮಠದಲ್ಲಿ ವಿವಾಹವಾದ ದಂಪತಿ, ಸೋಮವಾರ ಬೆಂಗಳೂರಿಗೆ ಬಂದು ಕಮಿಷನರ್ ಕಚೇರಿ ಅಧಿಕಾರಿ ಗಳನ್ನು ಭೇಟಿಯಾಯಿತು. 'ನನಗೂ ಮತ್ತು ಪತಿಗೂ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ' ಎಂದು ಜಯಕಲ್ಯಾಣಿ ಕಮಿಷನರ್ ಅವರಿಗೆ ನೀಡಿರುವ ಮನವಿಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.