ಮೈಸೂರು: ‘ಟಿಪ್ಪು ಸುಲ್ತಾನ್ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರಬಹುದು. ಆದರೆ ಭಾರತೀಯತೆ, ರಾಷ್ಟ್ರೀಯತೆಯನ್ನು ಎತ್ತಿಹಿಡಿದಿದ್ದ. ಜಗತ್ತಿನಲ್ಲಿ ಭಾರತಕ್ಕೆ ತನ್ನದೇ ಆದ ಮೌಲ್ಯ ತಂದುಕೊಟ್ಟಿರುವ ಆತನ ಕುರಿತ ಸತ್ಯಗಳನ್ನು ಸುಳ್ಳಾಗಿಲು ಸಾಧ್ಯವಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಪಾದಿಸಿದರು.

ಇತಿಹಾಸತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಬರೆದಿರುವ 'ಟೀಪೂ ಮಾನ್ಯತೆ ಸಿಗದ ಸುಲ್ತಾನ್: ಅಂದು- ಇಂದು' ಪುಸ್ತಕವನ್ನು ಶನಿವಾರ ಇಲ್ಲಿ ಬಿಡುಗಡೆಗೊಳಿಸಿ ಮಾತನಾಡಿ, ‘ಟಿಪ್ಪು, ಜಗತ್ತಿನ ಮಾನ್ಯತೆ ಪಡೆದಿರುವ ಚಕ್ರವರ್ತಿ. ಸೂರ್ಯನ ಪ್ರಕಾಶಕ್ಕೆ ಪರದೆ ಹಿಡಿಯಲು ಸಾಧ್ಯವಿಲ್ಲ. ಟಿಪ್ಪು ಹೊಂದಿರುವ ಮಾನ್ಯತೆ ಮರೆಮಾಚಲು ಆಗದು’ ಎಂದು ಹೊಗಳಿದರು.

‘ಕೊಡಗಿನಲ್ಲಿ 80 ಸಾವಿರ ಮಂದಿಯನ್ನು ಕೊಂದಿದ್ದ ಎಂದು ಆತನ ಟೀಕಾಕಾರರು ಆರೋಪಿಸುತ್ತಾರೆ. ಕೊಡಗಿನ ಈಗಿನ ಜನಸಂಖ್ಯೆ ಸುಮಾರು 4 ಲಕ್ಷ. ಎರಡೂವರೆ ಶತಮಾನದ ಹಿಂದೆಯೇ 80 ಸಾವಿರ ಮಂದಿಯನ್ನು ಕೊಲ್ಲಬೇಕಿದ್ದರೆ ಅಲ್ಲಿನ ಜನಸಂಖ್ಯೆ ಎಷ್ಟಿತ್ತು’ ಎಂದು ಪ್ರಶ್ನಿಸಿದರು.

‘ನೆಪೋಲಿಯನ್ ಒಳಗೊಂಡಂತೆ ಜಗತ್ತು ಕಂಡ ಮಹಾನ್ ಚಕ್ರವರ್ತಿಗಳು ಕೂಡಾ ಎದುರಾಳಿಗಳ ಮುಂದೆ ತಲೆಬಾಗಿದ್ದಾರೆ. ತನ್ನ ವೈರಿಗಳ ಮುಂದೆ ಮಂಡಿಯೂರಿ ಶರಣಾಗದ ಜಗತ್ತಿನ ಏಕೈಕ ವೀರನೆಂದರೆ ಅದು ಟಿಪ್ಪು’ ಎಂದು ಬಣ್ಣಿಸಿದರು.

ಸಾಮೀಜಿಗಳು ಖಂಡಿಸುತ್ತಿಲ್ಲ ಏಕೆ?: ‘ಒಬ್ಬರ ಅನ್ನ ಕಿತ್ತುಕೊಳ್ಳುವಂತಹ ಕೆಟ್ಟ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದೆ. ಆದರೂ ವಿವಿಧ ಧರ್ಮಗಳ ಗುರುಗಳು ಮಾತನಾಡುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ಅನ್ನ ದಾಸೋಹಿಗಳು ಎನಿಸಿಕೊಂಡಿರುವ ಸ್ವಾಮೀಜಿಗಳು ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಖಂಡಿಸುತ್ತಿಲ್ಲ. ಸರ್ಕಾರದ ಅನುದಾನ ನಿಲ್ಲಬಹುದು ಎಂಬ ಭಯವೇ? ಸಮಾಜ ತಿದ್ದಬೇಕಾದ ಸ್ವಾಮೀಜಿಗಳೇ ಮೂಕರಾಗಿದ್ದಾರೆ ಅಂದರೆ ಏನರ್ಥ?’ ಎಂದು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.