ಬೆಂಗಳೂರು: ಉಪವಾಸದ ಹಬ್ಬ ಎಂದೇ ಪ್ರಸಿದ್ಧವಾದ ವೈಕುಂಠ ಏಕಾದಶಿಯನ್ನುರಾಜ್ಯದ ವಿವಿಧೆಡೆ ಸೋಮವಾರ ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು.

ನಗರದ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ರಾಜ್ಯದ ಜನತೆಗೆ ಒಳಿತಾಗಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಯಸ್ಸು, ಆರೋಗ್ಯ ವೃದ್ಧಿಯಾಗಲಿ. ಅವರು ಮತ್ತೊಂದು ಅವಧಿಗೆಪ್ರಧಾನಿಯಾಗಿ ಅಧಿಕಾರ ನಡೆಸುವಂತಾಗಲಿ’ ಎಂದು ಪ್ರಾರ್ಥನೆ ಸಲ್ಲಿಸಿದರು.

ನಗರದ ಇಸ್ಕಾನ್ ಸೇರಿದಂತೆ ಹಲವು ದೇಗುಲಗಳಲ್ಲಿ ಮುಂಜಾನೆಯಿಂದಲೇ ಜನರು ಕಿಕ್ಕಿರಿದು ಸೇರಿದ್ದಾರೆ. ದೇವರದ ದರ್ಶನ ಮಾಡಿಕಚೇರಿಗೆ ಹೊರಡುವ ಧಾವಂತವೂ ಹಲವರಲ್ಲಿ ಕಂಡು ಬಂತು.

ವೈಯಾಲಿಕಾವಲ್‌ನ ಟಿಟಿಡಿ ದೇವಸ್ಥಾನದಲ್ಲಿವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆ 5 ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.ಈವರೆಗೆ ಸಾವಿರಾರು ಭಕ್ತರು ದರ್ಶನ ಪಡೆದಿದ್ದಾರೆ.ವೃದ್ಧರು, ಅಂಗವಿಕಲರು ಮತ್ತು ಗರ್ಭಿಣಿಯರಿಗೆ ವಿಶೇಷ ಪಾಸ್‌ಗಳ ಮೂಲಕ ನೇರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರಾಜಾಜಿನಗರದ ಕೈಲಾಸ ವೈಕುಂಠ ಮಹಾ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟರಮಣ ಸ್ವಾಮಿಗೆ ವಿಶೇಷ ಅಲಂಕಾರ. (ಪ್ರಜಾವಾಣಿ ಚಿತ್ರ: ರಂಜು ಪಿ.)

ಬೆಂಗಳೂರಿನ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ (ಚಿತ್ರ: ಕೆ.ಪಿ.ಕೃಷ್ಣಕುಮಾರ್)

ಚಿಕ್ಕಮಗಳೂರು ಸಮೀಪದ ಹಿರೇಮಗಳೂರು ಕೋದಂಡರಾಮಚಂದ್ರಸ್ವಾಮಿ ದೇಗುಲದಲ್ಲಿ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದ ಭಕ್ತರು. (ಚಿತ್ರ: ಎ.ಎನ್.ಮೂರ್ತಿ)

ಹಿರೇಮಗಳೂರಿನಲ್ಲಿ ನೆರೆದಿದ್ದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.