ಬೆಂಗಳೂರು: ‘ಪ್ರಜಾವಾಣಿ’ಯ ಅಂತರ್ಜಾಲ ತಾಣ prajavani.net ಹೊಸ ವಿನ್ಯಾಸಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವೆಬ್ಸೈಟ್ನ ಫೀಡ್ಬ್ಯಾಕ್ ಫಾರಂ ಮೂಲಕ ಪ್ರತಿಕ್ರಿಯಿಸಿರುವ ನೂರಾರು ಓದುಗರು ‘ಸುದ್ದಿ ಈಗ ಮತ್ತಷ್ಟು ಸುಂದರವಾಗಿದೆ’ ಎಂದು ಸಂತಸ ಸೂಚಿಸಿದ್ದಾರೆ. ಕೆಲವರು ನಮಗೆ ಇಂಥ ವಿಷಯದ ಬಗ್ಗೆ ಹೆಚ್ಚು ಸುದ್ದಿ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

‘ಹೊಸ ವಿನ್ಯಾಸ ಓದುಗ ಸ್ನೇಹಿಯಾಗಿದೆ. ನಾನು ಹಿಂದೆಯೂ ಪ್ರಜಾವಾಣಿ ಓದುತ್ತಿದ್ದೆ. ಮುಂದೆಯೂ ಓದುತ್ತೇನೆ’ ಎಂದು ಕುಮಾರ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಬಾಲ್ಯದಿಂದಲೂ ಪ್ರಜಾವಾಣಿ ಓದುವುದನ್ನು ರೂಢಿಸಿಕೊಂಡಿರುವ ಮೋಹನ್ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ‘ವೆಬ್ಸೈಟ್ನ ವಿನ್ಯಾಸ ಚೆನ್ನಾಗಿದೆ. ಅಂತರ್ಜಾಲದ ಸಾಧ್ಯತೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ನಿರ್ಭಿಡೆಯ ಪತ್ರಿಕೋದ್ಯಮವನ್ನು ಪ್ರಜಾವಾಣಿ ಮುಂದುವರಿಸಬೇಕು’ ಎಂದು ಅವರು ಸಲಹೆ ಮಾಡಿದ್ದಾರೆ.

‘ಹೊಸ ವಿನ್ಯಾಸ ಚೆನ್ನಾಗಿದೆ. ಇನ್ನಷ್ಟು ವಿಭಾಗಗಳು ಬೇಕಿತ್ತು’ ಎನ್ನುವುದು ಬೆಂಗಳೂರಿನ ವಕೀಲ ಕೆ.ಬಿ.ಕೆ.ಸ್ವಾಮಿ ಅವರ ಅಭಿಪ್ರಾಯ. ‘ಆರೋಗ್ಯ, ತಂತ್ರಜ್ಞಾನ, ಆಟೋಮೊಬೈಲ್, ಆಹಾರ ಕುರಿತಂತೆ ಪ್ರತ್ಯೇಕ ವಿಭಾಗಗಳನ್ನು ಮಾಡಿರುವುದು ಓದುಗರಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ರೀತಿಕೋರ್ಟ್, ಕಾನೂನು, ಸಂವಿಧಾನಾತ್ಮಕ ವಿಷಯಗಳಿಗಾಗಿ ಪ್ರತ್ಯೇಕ ವಿಭಾಗವನ್ನು ಮಾಡಬೇಕಿತ್ತು’ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.