ಬೆಂಗಳೂರು: ರಾಜ್ಯದ ವಿವಿಧೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದ ಸಂಘಟಕ, ಯಕ್ಷಗಾನ ಕಲಾವಿದ ಸೂರ್ಯನಾರಾಯಣ ಪಂಜಾಜೆ (71) ಅವರು ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.ಎನ್.ಪಂಜಾಜೆ ಅವರು 1980ರ ದಶಕದಲ್ಲಿ ಬೆಂಗಳೂರಿಗೆ ಬಂದು ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಯಕ್ಷಗಾನದ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿ ಜನಾನುರಾಗಿಯಾಗಿದ್ದ ಅವರನ್ನು ಇತ್ತೀಚೆಗಷ್ಟೇ ಉಡುಪಿಯಲ್ಲಿ ಸರಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹೆಸರಿನಲ್ಲಿ ಯಕ್ಷಗಾನದ ಸೇವೆಯಲ್ಲಿ ತೊಡಗಿದ್ದ ಎಸ್.ಎನ್.ಪಂಜಾಜೆ ಅವರಿಗೆ ಪತ್ನಿ ಮನೋರಮಾ, ಪುತ್ರ ಕೈಲಾಸ್ ಭಟ್ ಇದ್ದಾರೆ.

ಯಕ್ಷಗಾನದಲ್ಲಿ ಜಮದಗ್ನಿ, ದುಷ್ಟಬುದ್ಧಿ, ಭೀಮ, ಕೌರವ, ಶೂರ್ಪನಖಿ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದ ಅವರು, ಕಂಪನಿ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಯಕ್ಷಗಾನ ಸಂಘಟಕರಾಗಿ ದೇಶ ವಿದೇಶಗಳಲ್ಲಿಯೂ ತಂಡವನ್ನು ಒಯ್ದು ಪ್ರದರ್ಶನ ಮಾಡಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ಯಕ್ಷಗಾನ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಹಿರಿಯ ಕಲಾವಿದರನ್ನು ಗೌರವಿಸಿ, ಯಕ್ಷಗಾನಕ್ಕೂ ವಿಶೇಷ ಮಾನ್ಯತೆಯನ್ನೂ ದೊರಕಿಸಿಕೊಟ್ಟವರು ಅವರು. ಬೆಂಗಳೂರಿನ ಹವ್ಯಾಸಿ ಕಲಾವಿದರಿಗೆ ಯಕ್ಷಗಾನದ ವೇಷಭೂಷಣಗಳನ್ನು ಒದಗಿಸಿ, ಪ್ರಸಾಧನವನ್ನೂ ನಿರ್ವಹಿಸುತ್ತಾ ಬೆಂಗಳೂರಿನಲ್ಲಿ ತೆಂಕುತಿಟ್ಟು ಯಕ್ಷಗಾನವನ್ನು ಬೆಳೆಸಿದವರಲ್ಲೊಬ್ಬರು. ವಿನಯದಿಂದಲೇ ಎಲ್ಲರೊಂದಿಗೆ ಬೆರೆಯುತ್ತಾ ಬೆಳೆಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು.

13ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವು 2018ರಲ್ಲಿ ಕುಂದಾಪುರದಲ್ಲಿ ಸಂಘಟಿಸಿದ್ದ ಅವರಿಗೆ ನಂತರ ಅಪಘಾತವಾಗಿತ್ತು. ಬಳಿಕ ಕೊರೊನಾ ಪಿಡುಗಿನ ಸಮಯದಲ್ಲಿ ಯಕ್ಷಗಾನದ ಚಟುವಟಿಕೆಗಳನ್ನು ನಡೆಸಲಾಗದೆ ನೊಂದಿದ್ದರು.

ಇವರ ಕಲಾ ಸೇವೆಗೆ ಕೇರಳ ರಾಜ್ಯಮಟ್ಟದ ಪ್ರಶಸ್ತಿ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಚಿಟ್ಟಾಣಿ ಪ್ರಶಸ್ತಿ, ಕಲಾ ಕೌಮುದಿ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನೃತ್ಯೋತ್ಸವ ಪುರಸ್ಕಾರ, ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಗಳು ಸಂದಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.