ಬಾಗಲಕೋಟೆ: ಕೈಮಗ್ಗದಲ್ಲಿ ನೇಯ್ದ ಶ್ರೇಯದೊಂದಿಗೆ ದೇಶಾದ್ಯಂತ ಮನೆಮಾತಾಗಿರುವ ಇಳಕಲ್ ಬ್ರ್ಯಾಂಡ್ನ ಸೀರೆಗಳಿಗೆ ಅಂಚೆ ಇಲಾಖೆ ಕೂಡ ಮನ್ನಣೆ ನೀಡಿದೆ. ಇಳಕಲ್ ಸೀರೆ ಚಿತ್ರ ಇರುವ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಹೊರತಂದಿದೆ.

ಬಾಗಲಕೋಟೆಯಲ್ಲಿ ಶನಿವಾರ ನಡೆದಬಾಗಾಪೆಕ್ಸ್–2018 ಅಂಚೆ ಚೀಟಿ ಸಂಗ್ರಹದ ಪ್ರದರ್ಶನದ ವೇಳೆ ಈ ಲಕೋಟೆಯನ್ನು ಉತ್ತರ ಕರ್ನಾಟಕ ಕ್ಷೇತ್ರದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್.ಶ್ರೀನಿವಾಸ ಬಿಡುಗಡೆ ಮಾಡಿದರು.

₹20 ಮುಖಬೆಲೆಯ ಈ ವಿಶೇಷ ಅಂಚೆ ಲಕೋಟೆ ಪ್ರದರ್ಶನದ ವೇಳೆ ಕೊಳ್ಳಲು ಲಭ್ಯವಿದೆ. ರಾಜ್ಯದ ಎಲ್ಲ ಅಂಚೆ ಕಚೇರಿಗಳಲ್ಲೂ ಈ ಲಕೋಟೆಯನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಲಕೋಟೆಯ ಮುಂಭಾಗದಲ್ಲಿ ಇಳಕಲ್ ಸೀರೆಯ ಚಿತ್ರವಿದ್ದರೆ, ಹಿಂಭಾಗದಲ್ಲಿ ಸೀರೆಯ ವಿಶೇಷತೆ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.