ಕೋಲಾರ: ‘ಮೂವತ್ತು ವರ್ಸ್‌ದಿಂದ ನೆರಳು ಕೊಟ್ಟಿರೋ ಈ ಗುಡುಸ್ಲು, ಬುರ್ರಕತೆಯ ಬಿಟ್ಟರೆ ನಂಗೆ ಬೇರೆ ಯಾವ ಆಸ್ತಿಯೂ ಇಲ್ಲ. ಒಂದು ಸಣ್ಣ ಮನೆ ಕಟ್ಟಿಸಿಕೊಡಿ ಎಂದು ಐದಾರು ಬಾರಿ ಪಂಚಾಯ್ತಿಗೆ ಅರ್ಜಿ ಕೊಟ್ಟೆ, ಜಾಗ ಇದ್ದರೆ ತೋರ್ಸು ಕಟ್ಸಿ ಕೊಡ್ತೀವಿ ಅಂದ್ರ, ನಾನೆಲ್ಲಿಂದ ಜಾಗ ತರ್ಲಿ?’

–ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಯನ್ನು ಭಾನುವಾರವಷ್ಟೇ ಸ್ವೀಕರಿಸಿ ಬಂದಿರುವ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾರಹಳ್ಳಿಯ ಲಕ್ಷ್ಮಮ್ಮ ತನ್ನ ಮುರುಕಲು ಗುಡಿಸಲಿನ ಮುಂದೆ ಕುಳಿತು ಹೇಳಿದ ಮಾತಿದು.

ಕಾರಹಳ್ಳಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಈರಣ್ಣ ಗುಡಿಗೆ ಸೇರಿದ ಜಾಗದಲ್ಲಿ, ದೊಡ್ಡ ಆಲದ ಮರದ ನೆರಳಲ್ಲಿ ಕಟ್ಟಿಕೊಂಡಿರುವ ಗುಡಿಸಲಿನಲ್ಲಿ ನಾಡಿನ ಬುರ್ರಕತೆ ಕಲಾ ಪ್ರಕಾರದೊಂದಿಗೆ ಈ ಮಹಿಳೆ ಜೀವಿಸುತ್ತಿದ್ದಾರೆ. ಗುಡಿಸಲ ಬದುಕಿಗೆ ಬುರ್ರಕತೆಯೇ ಆಧಾರ.
ಪ್ರಶಸ್ತಿಯ ಜೊತೆಗೆ ನೀಡಿರುವ ಪ್ರಶಂಸಾ ಫಲಕವನ್ನು ತೂಗುಹಾಕಲೂ ಅವರ ಗುಡಿಸಲಿನಲ್ಲಿ ಸರಿಯಾದ ಗೋಡೆ ಇಲ್ಲ. ಬಿಪಿಎಲ್ ಕಾರ್ಡಿನ ಪಡಿತರ, ಸೌದೆ ಒಲೆ ಅಡುಗೆ, ಬುಡ್ಡಿದೀಪದ ಬೆಳಕಿನಲ್ಲಿ ಅವರ ಜೀವನ ಸಾಗಿದೆ. ಅವರನ್ನು ಸಂದರ್ಶಿಸುವ ಸಲುವಾಗಿ ಹಳ್ಳಿಗೆ ಭೇಟಿ ನೀಡಿದ ವೇಳೆ, ಪ್ರಶಸ್ತಿ ಜೊತೆಗೆ ಬಂದಿದ್ದ ₨ 10 ಸಾವಿರ ಮೌಲ್ಯದ ಚೆಕ್‌ಅನ್ನು ತಾನು ಹೊಂದಿರುವ ಪ್ರಗತಿ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆ ಅಥವಾ ಬೇರೆ ಬ್ಯಾಂಕಿನಲ್ಲಿ ಕೊಡಬೇಕೆ ಎಂದು ಓದು ತಿಳಿದ ಮಹಿಳೆಯೊಬ್ಬರನ್ನು ಅವರು ಬೆಳಿಗ್ಗೆ ಕೇಳುತ್ತಾ ನಿಂತಿದ್ದರು!

‘ಸಾವಿನ ಮನೆಗಳಲ್ಲಿ ಮಾತ್ರ ಬುರ್ರಕತೆಯನ್ನು ಹಾಡಲು ಕರೀತಾರೆ. ಹಾಡಲು ಬಾ ಅಂತ ಕರೆದರೆ ಜೀವನ. ಕರೀಲಿಲ್ಲ ಅಂದ್ರೆ ಏನ್ ಮಾಡಾಣ? ಇರುಳೆಲ್ಲ ಹಾಡಿದ್ರೆ ಬರೋ ಪುಡಿಗಾಸಲ್ಲಿ ಮಗಳ್ನ ಓದುಸ್ಲಾ? ಕಾಯಿಲೆ ಬಿದ್ದ ಗಂಡನ್ನ ನೋಡ್ಲಾ?’ ಎಂದು 60 ವಯಸ್ಸು ದಾಟಿದ ಲಕ್ಷ್ಮಮ್ಮ ತಮ್ಮ ಅಸಹಾಯಕತೆ ಹೊರಹಾಕಿದರು.

ಕಷ್ಟ ಅನಿವಾರ್ಯವಲ್ಲ

ರಾಜ್ಯದಲ್ಲಿ ಬಹುತೇಕ ಜನಪದ ಕಲಾವಿದರು ಕಷ್ಟದ ಪರಿಸ್ಥಿತಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಕೆಲವರು ಭಿಕ್ಷೆ ಬೇಡುತ್ತಾರೆ. ಅದರೊಂದಿಗೆ ಕಲಾ ಪ್ರಕಾರಗಳನ್ನು ಉಳಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಲಕ್ಷ್ಮಮ್ಮ ಅವರಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ಅದರೊಂದಿಗೆ ಅವರು ಗೌರವಯುತವಾಗಿ ಬದುಕಲು ಬೇಕಾದ ಅನುಕೂಲಗಳನ್ನು ಸರ್ಕಾರ, ಜಿಲ್ಲಾಡಳಿತ ಮಾಡಿಕೊಡಬೇಕು.
–ಪಿಚ್ಚಳ್ಳಿ ಶ್ರೀನಿವಾಸ್, ಜಾನಪದ ಅಕಾಡೆಮಿ ಅಧ್ಯಕ್ಷ

ಬಂಗಾರಪೇಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಒಬ್ಬಳೇ ಮಗಳು ಮುನಿರತ್ನ ಮತ್ತು ಮೂರು ವರ್ಷದಿಂದ ಪಾರ್ಶ್ವವಾಯುವಿಗೆ ತುತ್ತಾಗಿರುವ ಪತಿ ಮುನಿಸ್ವಾಮಿಯನ್ನೂ ಸಾಕುತ್ತಾ ಈ ಕಲಾವಿದೆ ತನ್ನೊಂದಿಗೆ ಸುಮಾರು ಇಪ್ಪತ್ತು ಕಲಾವಿದರನ್ನು ಸೇರಿಸಿಕೊಂಡು ಜಿಲ್ಲೆಯಾದ್ಯಂತ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತಮಿಳುನಾಡು ಗಡಿಭಾಗದ ಹಳ್ಳಿಗಳಿಗೂ ತೆರಳಿ ಕನ್ನಡ–ತೆಲುಗಿನಲ್ಲಿ ಬುರ್ರಕತೆ ಗಾಯನ, ನಾಟಕ ಪ್ರದರ್ಶಿಸಿ ಬದುಕುತ್ತಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ನೆಲೆಸಿರುವ ಕಲಾವಿದರ ಸಂಗಮದಲ್ಲಿಯೇ ಬುರ್ರಕತೆ ಸಾಗುತ್ತಿದೆ.

ಬಾಲನಾಗಮ್ಮ, ಕಾಂಬೋಜಿರಾಜ, ನಲ್ಲತಂಗಿ, ಅಲ್ಲಿ ಅರ್ಜುನ, ಸಾಸುಲು ಚಿನ್ನಮ್ಮ, ದೇಸರಿಂಗರಾಜ ಕತೆ ಸೇರಿದಂತೆ ಹಲವು ಬುರ್ರಕತೆಗಳನ್ನು ನೆನಪಿನ ಶಕ್ತಿಯಿಂದ ಪ್ರತಿಬಾರಿ ಹೊಸದಾಗಿ ನಿರೂಪಿಸುವ ಕುಶಲಗಾರಿಕೆಯ ಲಕ್ಷ್ಮಮ್ಮ 19 ಕಲಾವಿದರನ್ನು ತನ್ನ ಜೊತೆಗೇ ಕರೆದೊಯ್ಯುತ್ತಾರೆ.

ರಾತ್ರಿಯಾದರೆ, ಕೆಲವು ಸಾಮಗ್ರಿಗಳನ್ನು ಹತ್ತಿರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಟ್ಟು ಬರುತ್ತಾರೆ. ಮಳೆ ಬಂದರೆ ಗುಡಿಸಲು ಸೋರುವುದರಿಂದ ಶಾಲೆಯ ಆವರಣವೇ ತಾತ್ಕಾಲಿಕ ಆಶ್ರಯತಾಣವಾಗುತ್ತದೆ.

‘ಇಂಥ ಅಪರೂಪದ ಕಲಾವಿದೆ ನಮ್ಮ ಹಳ್ಳಿಯಲ್ಲಿದ್ದರು ಎಂಬುದು ಅವರನ್ನು ದಿನವೂ ನೋಡುತ್ತಿದ್ದರೂ ಗೊತ್ತಾಗಿರಲಿಲ್ಲ. ಅವರಿಗೆ ಸೂರನ್ನು ಕಲ್ಪಿಸಿದರೆ ಜನಪದ ಕಲೆಯನ್ನು ನಿಜವಾದ ಅರ್ಥದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಹಳ್ಳಿಯ ಸರ್ಕಾರಿ ಶಾಲೆಯ ಸಹಶಿಕ್ಷಕ ಮುರಳಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.