ಮಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಸೋಮವಾರ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ನಾರಾಯಣ ಗುರುಗಳು ಸ್ಥಾಪಿಸಿದ ಲಿಂಗ ರೂಪದಲ್ಲಿರುವ ಗೋಕರ್ಣನಾಥ ದೇವರಿಗೆ ದಲಿತ ಮಹಿಳೆಯರಿಬ್ಬರು ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದ ಗರ್ಭಗುಡಿಗೆ ದಲಿತ ಮಹಿಳೆಯರಿಗೆ ಪ್ರವೇಶ ಕಲ್ಪಿಸಲಾಯಿತು. ಬೆಳಿಗ್ಗೆ ಸುಮಾರು ಹತ್ತೂವರೆಗೆ ದಲಿತ ಮಹಿಳೆಯರಾದ ಚಂದ್ರಾವತಿ ಮತ್ತು ಲಕ್ಷ್ಮಿ ಅವರನ್ನು ಕಾಂಗ್ರೆಸ್ ಮುಖಂಡ ಬಿ. ಜನಾರ್ದನ ಪೂಜಾರಿ ಅವರೇ ದೇವಳದ ಹೆಬ್ಬಾಗಿಲಿಗೆ ತೆರಳಿ ಚೆಂಡೆ ವಾದ್ಯಮೇಳದೊಂದಿಗೆ ಬರಮಾಡಿಕೊಂಡರು.

ವಾದ್ಯಮೇಳದೊಂದಿಗೇ ದೇವಸ್ಥಾನದ ಪ್ರಾಕಾರ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅರ್ಚಕಿಯರಿಬ್ಬರೂ ಗೋಕರ್ಣನಾಥ ದೇವರ ಗರ್ಭಗುಡಿ ಪ್ರವೇಶಿಸಿ ದೇವರನ್ನು ಪ್ರಾರ್ಥಿಸಿ ಹರಿವಾಣದಲ್ಲಿ ಸಿಂಗರಿಸಿಟ್ಟ ಆರತಿಯನ್ನು ಬೆಳಗಿದರು.

ಪತಿ ಕಳೆದುಕೊಂಡ ಮಹಿಳೆಯರಿಗೆ ಬೆಳ್ಳಿ ರಥ ಎಳೆಯುವ ಅವಕಾಶ, ಚಂಡಿಕಾ ಹೋಮ ಮಾಡುವ ಅವಕಾಶಗಳನ್ನು ಈ ಹಿಂದಿನ ವರ್ಷಗಳಲ್ಲಿ ದೇವಸ್ಥಾನದಲ್ಲಿ ಕಲ್ಪಿಸಲಾಗಿತ್ತು. ಅಲ್ಲದೆ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಸಮಾಜದಲ್ಲಿ ತುಚ್ಛವಾಗಿ ಕಾಣಬಾರದು ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಹೂವು, ಕುಂಕುಮ, ಬಳೆ ಮತ್ತು ಸೀರೆ ವಿತರಿಸಲಾಗಿತ್ತು. ಪತಿಯನ್ನು ಕಳೆದುಕೊಂಡ ಮಹಿಳೆಯರೇ ಅರ್ಚಕಿಯರಾಗಿಯೂ ನೇಮಕಗೊಂಡಿದ್ದರು.

ಜೊತೆಗೆ ಕಳೆದ ವರ್ಷ ದಸರಾ ಸಂದರ್ಭದಲ್ಲಿ ದಲಿತ ಮಹಿಳೆಯೊಬ್ಬರನ್ನು ಕರೆಸಿ ಸ್ವತಃ ಪೂಜಾರಿ ಅವರೇ ಅವರ ಪಾದ ಪೂಜೆಮಾಡಿ ಜಾತಿ ಭೇದದ ನಿವಾರಣೆಯ ಪ್ರಯತ್ನ ನಡೆಸಿದ್ದರು. ಈ ವರ್ಷ ಸುಧಾರಣೆಯ ಅವರ ಪ್ರಯತ್ನಗಳಿಗೆ ಹೊಸದೊಂದು ಸೇರ್ಪಡೆಯಾದಂತಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ಅವರು, ನಾರಾಯಣ ಗುರುಗಳ ಆದರ್ಶವನ್ನು ಪಾಲಿಸುವ ನಿಟ್ಟಿನಲ್ಲಿ ದಲಿತ ಮಹಿಳೆಯರಿಗೆ ದೇವರ ಪೂಜೆ ಮಾಡುವ ಅವಕಾಶ ಕಲ್ಪಿಸಿರುವುದಾಗಿ ಹೇಳಿದರು. ‘ನಾವೆಲ್ಲರೂ ದೇವರ ಮಕ್ಕಳು, ಜಾತಿ ಮತದ ಭೇದವಿಲ್ಲದೆ ಎಲ್ಲರಿಗೂ ದೇವರ ಪೂಜೆ ಮಾಡುವ ಅವಕಾಶವಿದೆ ಎನ್ನುವುದನ್ನು ನಾರಾಯಣ ಗುರುಗಳು ಹೇಳಿದ್ದಾರೆ. ಭಾರತದ ಸಂವಿಧಾನ ಕೂಡ ಜಾತಿ ಭೇದ, ಅಸ್ಪೃಶ್ಯತೆಯನ್ನು ವಿರೋಧಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸಮಾನವಾದ ಗೌರವಕ್ಕೆ ಅರ್ಹರು ಎಂಬುದನ್ನು ಜನರು ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ಮಹಿಳೆಯರಿಬ್ಬರಿಗೆ ಮಂತ್ರಗಳನ್ನು ಉಚ್ಛರಿಸುವ ತರಬೇತಿ ಆಗಿದೆಯೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ನಾರಾಯಣ ಗುರುಗಳು ದೇವಸ್ಥಾನ ಸ್ಥಾಪಿಸಿದಾಗ ಪೂಜೆಗೆ ಭಟ್ಟರೇ ಇರಲಿಲ್ಲ. ದೇವರ ಪೂಜೆಗೆ ಭಕ್ತಿಗಿಂತ ಮಿಗಿಲಾದ ಯಾವುದೇ ಮಂತ್ರದ ಅಗತ್ಯವಿಲ್ಲ ಎಂದು ನಾರಾಯಣ ಗುರು ಹೇಳಿದ್ದರು. ಆದರೂ ಮಹಿಳೆಯರಿಬ್ಬರಿಗೆ ದೇವರನ್ನು ಪೂಜಿಸುವ ಬಗ್ಗೆ ಮೂರು ದಿನಗಳ ತರಬೇತಿ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.