ಶ್ರವಣಬೆಳಗೊಳ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುನ್ನುಡಿಯಾಗಿ ಶನಿವಾರ ಇಲ್ಲಿ ನಡೆದ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಮೆರವಣಿಗೆಯಲ್ಲಿ ಕನ್ನಡದ ಗಟ್ಟಿ ದನಿ ಮಾರ್ದನಿಸಿತು.

ಸಾವಿರಾರು ಕಂಠಗಳಿಂದ ಏಕಕಾಲಕ್ಕೆ ಭುವನೇಶ್ವರಿಯ ಜೈಕಾರ ಮೊಳಗಿತು. ರಾಜ್ಯದ ವಿವಿಧ ಭಾಗಗಳಿಂದ ಬಂದ ಕಲಾ ತಂಡಗಳ ಪ್ರದರ್ಶನದ ಮಧ್ಯದಲ್ಲಿ ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ದಂಪತಿಯ ಮೆರವಣಿಗೆ ನಡೆಯಿತು.

ಸಂಜೆ 4ಗಂಟೆಗೆ ಶ್ರವಣಬೆಳಗೊಳ ಮಠದ ಆವರಣದಲ್ಲಿರುವ ಯಾತ್ರಿ ನಿವಾಸಕ್ಕೆ ಬಂದ ಸಮ್ಮೇಳನಾಧ್ಯಕ್ಷರನ್ನು ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಲೋಕೋಪಯೋಗಿ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಎ. ಮಂಜು ಮತ್ತಿತರರು ಫಲ ತಾಂಬೂಲಗಳನ್ನು ಕೊಟ್ಟು, ಮಾಲೆ ಹಾಕಿ ಸ್ವಾಗತಿಸಿದರು. ಬಳಿಕ ಸಿದ್ದಲಿಂಗಯ್ಯ ದಂಪತಿಯನ್ನು ತಳಿರು ತೋರಣಗಳಿಂದ, ತಾವರೆ ದಳದ ಮಾದರಿಯಲ್ಲಿ ಸಿಂಗರಿಸಿದ್ದ ಎತ್ತಿನ ಗಾಡಿಯ ಮೇಲೆ ಕೂರಿಸಲಾಯಿತು. ಗಾಡಿಯ ಮೇಲೇರಿದ ಸಿದ್ದಲಿಂಗಯ್ಯ ಮೊದಲು ನೆರೆದಿದ್ದ ಸಾವಿರಾರು ಜನರಿಗೆ ಕೈಮುಗಿದರು. ಉಸ್ತುವಾರಿ ಸಚಿವ ಮಹದೇವಪ್ಪ ಅವರು ಗಾಡಿ ಏರಿ ಸಿದ್ದಲಿಂಗಯ್ಯ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಮಾಲೆ ಹಾಕಿದರು. ಪತ್ನಿ ರಮಾ ಅವರಿಗೂ ಹಸಿರು ವರ್ಣ, ಬಂಗಾರದ ಜರಿಗಳ ಪೇಟ ತೊಡಿಸಿ, ಕೈಗೆ ಕನ್ನಡ ಧ್ವಜವನ್ನು ನೀಡಲಾಯಿತು. ಇದಾದ ಬಳಿಕ ಅರಕಲಗೂಡು ಶಾಸಕ ಎ. ಮಂಜು ‘ಅಧ್ಯಕ್ಷ ದಂಪತಿ’ಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.

ಕೊನೆಯಲ್ಲಿ ಬಿಳಿ ಪಂಚೆ, ಬಿಳಿ ಅಂಗಿ, ಹೆಗಲ ಮೇಲೆ ಬಿಳಿಯ ಶಲ್ಯ ಹಾಕಿಕೊಂಡು, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಗಾಡಿಯೇರಿ ಚಾಟಿ ಬೀಸುತ್ತ ಸಾರಥಿಯ ಪಾತ್ರ ವಹಿಸಿದರು. ಆ ಕ್ಷಣದಲ್ಲಿ ಮುಗಿಲು ಮುಟ್ಟುವಂತೆ ಜೈಕಾರ ಮೊಳಗಿದವು.
ಅಲ್ಲಿಂದ ಎರಡೂವರೆ ಕಿ.ಮೀ. ದೂರ ಕ್ರಮಿಸಲು ಮೆರವಣಿಗೆಗೆ ಎರಡೂವರೆ ಗಂಟೆಗೂ ಹೆಚ್ಚು ಕಾಲಾವಕಾಶ ಹಿಡಿಯಿತು.
ಮೆರವಣಿಗೆಯ ಮುಂದೆ ಪೂರ್ಣಕುಂಭಗಳನ್ನು ಹೊತ್ತ ಮಹಿಳೆಯರು, ಹಿಂದೆ ಹಲವು ಎತ್ತಿನ ಗಾಡಿಗಳಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಲಾ ತಂಡಗಳು ಮೆರವಣಿಗೆ ನಡೆಸಿದವು.

ಕಂಸಾಳೆ, ಜಗ್ಗಲಿಗೆ ಮೇಳ, ಡೊಳ್ಳು ಕುಣಿತ, ಯಕ್ಷಗಾನ, ಮರಗಾಲು, ವೀರಗಾಸೆ, ವಿವಿಧ ಸ್ತಬ್ಧಚಿತ್ರಗಳನ್ನು ಒಳಗೊಂಡ ಭವ್ಯ ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಕನ್ನಡಪರ ಘೋಷಣೆಗಳನ್ನು ಕೂಗಿದರು. ತಾಯಿ ಭುವನೇಶ್ವರಿಯ ಜೈಕಾರದ ಜೊತೆಗೆ ‘ಬೆಳಗಾವಿ ನಮ್ಮದು, ಕಾಸರಗೋಡು ನಮ್ಮದು’ ಎಂಬ ಘೋಷಣೆಗಳೂ ಕೇಳಿಬಂದವು.

ಸಂಜೆ ಏಳು ಗಂಟೆಗೆ ಮೆರವಣಿಗೆ ಪ್ರಧಾನ ವೇದಕೆಯ ಮುಂದಿನ ಅ.ನ. ಕೃಷ್ಣರಾಯ ಮಹಾಮಂಟಪಕ್ಕೆ ತಲುಪಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜ, ಶಾಸಕರು, ಅಧಿಕಾರಿಗಳು ಅಲ್ಲಿ ಮತ್ತೊಮ್ಮೆ ಅಧ್ಯಕ್ಷರನ್ನು ಬರಮಾಡಿಕೊಂಡರು. ನೆರೆದಿದ್ದ ಸಾವಿರಾರು ಜನರು ಮತ್ತೆ ಕನ್ನಡ ಮಾತೆ, ಕನ್ನಡದ ಕವಿಗಳು, ಲೇಖಕರು, ಕಾದಂಬರಿಕಾರರ ಹೆಸರು ಹಿಡಿದು ಜೈಕಾರ ಕೂಗಿ ಕನ್ನಡದ ಧ್ವನಿಯನ್ನು ಮುಗಿಲು ಮುಟ್ಟಿಸುವ ಮೂಲಕ ಭಾನುವಾರ (ಫೆ. 1)ದಿಂದ ಆರಂಭವಾಗಲಿರುವ ‘ಅಕ್ಷರ ಜಾತ್ರೆ’ಗೆ ಗಟ್ಟಿ ದನಿಯ ವೇದಿಕೆ ನಿರ್ಮಿಸಿಕೊಟ್ಟರು.

ಇಂಥ ಮೆರವಣಿಗೆ ಇದೇ ಮೊದಲು: ‘ಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ಮತ್ತು ಅಧ್ಯಕ್ಷನಾಗಿ ಒಟ್ಟು 13 ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ದೇಸಿ ಸೊಗಡಿನ ಮೆರವಣಿಗೆ ನೋಡಿದ್ದು ಇದೇ ಮೊದಲು. ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಆಯೋಜಿಸಿರುವ ಈ ಮೆರವಣಿಗೆ ಅತ್ಯಂತ ಸಕಾಲಿಕವಾದುದು’ ಎಂದು ಪುಂಡಲೀಕ ಹಾಲಂಬಿ ಸಂತಸ ವ್ಯಕ್ತಪಡಿಸಿದರು.

‘ಎತ್ತಿನ ಗಾಡಿ ಗ್ರಾಮೀಣ ಬದುಕಿನ ಚಿಹ್ನೆ. ಸಿದ್ದಲಿಂಗಯ್ಯ ಅವರು ಸ್ವತಃ ಗ್ರಾಮೀಣ ಪ್ರದೇಶದಿಂದ ಬಂದವರು ಮತ್ತು ಗ್ರಾಮದೇವತೆಗಳ ಬಗ್ಗೆ ಸಂಶೋಧನೆ ನಡೆಸಿದವರು. ಆ ದೃಷ್ಟಿಯಿಂದಲೂ ಇದು ಅರ್ಥಪೂರ್ಣ ಮೆರವಣಿಗೆ. ಇಂಥ ಹಬ್ಬಗಳಲ್ಲಿ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.